ಆರ್‌ಎಸ್‌ಎಸ್ ಕಾರ್ಯಕ್ರಮಗಳ ನಿಷೇಧಕ್ಕೆ ಸಿಎಂಗೆ ಪ್ರಿಯಾಂಕ ಖರ್ಗೆ ಪತ್ರ/ಮುನಿಸ್ವಾಮಿ ಖಂಡನೆ/ ಬಹುಸAಖ್ಯಾತ ಹಿಂದೂಗಳಿಗೆ ಮಾಡಿದ ಅಪಮಾನ ಸಂಪುಟದಿAದ ವಜಾಗೆ ಆಗ್ರಹ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಒಂದು ಸಮುದಾಯವನ್ನು ಮೆಚ್ಚಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು, ಆರ್‌ಎಸ್‌ಎಸ್ ಪಥಸಂಚಲನ, ಸಭೆಗಳ ನಿಷೇಧಕ್ಕೆ ಸಿಎಂಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ ಖರ್ಗೆ ಕೂಡಲೇ ಬಹುಸಂಖ್ಯಾತ ಹಿಂದೂಗಳ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರನ್ನು ಕೂಡಲೇ ಸಂಪುಟದಿAದ ವಜಾಗೊಳಿಸಿ ರಾಜ್ಯ ಸರ್ಕಾರ ಮರ್ಯಾದೆ ಉಳಿಸಿಕೊಳ್ಳಲಿ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.

ಕೋಲಾರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ತಮ್ಮ ಪುತ್ರನೊಂದಿಗೆ ಗಣವೇಷಧಾರಿಯಾ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಬಕ್ರಿದ್, ರಂಜಾನ್ ಪ್ರಾರ್ಥನೆಗೆ ನಡು ರಸ್ತೆ, ಬಸ್, ರೈಲ್ವೆ, ವಿಮಾನ ನಿಲ್ದಾಣದಲ್ಲೂ ಜಾಗ ನೀಡುವ ಈ ಮರಿ ಖರ್ಗೆ ಸಚಿವರಾಗಿರುವ ಸರ್ಕಾರ ಬಹುಸಂಖ್ಯಾತ ಹಿಂದೂಗಳ ಕಾರ್ಯಕ್ರಮವನ್ನು ಪಾರ್ಕ್, ರಸ್ತೆಯಲ್ಲಿ ನಡೆಸಬಾರದು, ಗಣವೇಷಧಾರಿಗಳು ದೊಣ್ಣೆ ಹಿಡಿದು ಪಥಸಂಚಲನ ಮಾಡಲು ನಿಷೇಧ ಹೇರಬೇಕೆಂದು ಹೇಳಿರುವುದು, ರಸ್ತೆ, ಪಾರ್ಕ್ಗಳು ಪ್ರಿಯಾಂಕ ಖರ್ಗೆ ಅವರ ಸ್ವಂತ ಆಸ್ತಿಯಲ್ಲ ಎಂದು ಕಿಡಿಕಾರಿದರು.

ತಂದೆಗೆ ವಯಸ್ಸಾಗಿದೆ ಮುಂದೆ ತನ್ನ ಸ್ಥಾನ ಉಳಿಯಲ್ಲ. ಶಾಸಕನೂ ಆಗಲ್ಲ ಎಂದು ಭಯಗೊಂಡಿರುವ ಪ್ರಿಯಾಂಕ ಖರ್ಗೆ, ಹಿಂದೂ ಧರ್ಮ, ಸಂಸ್ಕೃತಿ ವಿರುದ್ದ ಮಾತನಾಡಿ ಪಕ್ಷದಲ್ಲಿ ಅಲ್ಪಾಯುಷಿಯಾಗಿರುವ ಸ್ಥಾನ ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಮರಿ ಖರ್ಗೆಯವರೇ ನಿಮ್ಮ ಪೂರ್ವಜರಿದ್ದ ಮನೆಗೆ ಬೆಂಕಿ ಇಟ್ಟು ಸುಟ್ಟವರು ಯಾರು? ಎಸ್‌ಡಿಪಿ, ಪಿಎಫ್‌ಐಗಳು. ವಿಧಾನಸೌಧದಲ್ಲಿ ಪಾಕ್‌ಗೆ ಜೈಕಾರ ಕೂಗಿದವರು ಯಾರು? ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟೋರು ಯಾರು? ಅಂತಹವರಿಗೆ ರಕ್ಷಣೆ ನೀಡುತ್ತಿರುವವರು ನಿಜವಾದ ತಾಲಿಬಾನಿಗಳಲ್ಲವೇ ಎಂದು ಅರ್ಥಮಾಡಿಕೊಂಡು ನಿಮಗೆ ದೇಶಪ್ರೇಮವಿದ್ದರೆ ಇಂತಹವರನ್ನು ನಿಷೇಧಿಸಿ ಎಂದು ಸಲಹೆ ನೀಡಿದರು.

ನಿಮ್ಮನ್ನು ಈ ರಾಜ್ಯದ ಜನತೆ ಈಗಾಗಲೇ ನೀವು ತಾಲಿಬಾನ್ ಏಜೆಂಟ್ ಎಂದು ಹೇಳುತ್ತಿದ್ದಾರೆ, ಭಾರತ-ಚೀನಾ ಯುದ್ದದಲ್ಲಿ ಆರ್‌ಎಸ್‌ಎಸ್ ಪಾತ್ರದ ಕುರಿತು ಅರಿತುಕೊಳ್ಳಿ, ನಿಮ್ಮದೇ ಪಕ್ಷದ ನೆಹರು ಪಿಎಂ ಆಗಿದ್ದಾಗ ಗಣರಾಜ್ಯೋತ್ಸವ ಫೆರೆಡ್‌ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದನ್ನು ನೆನಪಿಸಿಕೊಳ್ಳಿ, ದೇಶದ ಜನರಿಗೆ ತೊಂದರೆಯಾದರೆ ಅಲ್ಲಿ ಆರ್‌ಎಸ್‌ಎಸ್ ಪ್ರತ್ಯಕ್ಷವಾಗುತ್ತದೆ ಎಂದರು.

ವಕ್‌ಆಸ್ತಿ ಕಬಳಿಸಿರುವ ಖರ್ಗೆ ಕುಟುಂಬ ಕೇಂದ್ರದ ವಕ್ ಕಾಯಿದೆಯಿಂದ ಆಸ್ತಿ ಹೋಗುವ ಆತಂಕದಲ್ಲಿ ಮನಬಂದAತೆ ಮಾತನಾಡುತ್ತಿದ್ದಾರೆ. ಮುಂದೆ ಎನ್‌ಡಿಎ ಸರ್ಕಾರ ಬರುತ್ತದೆ, ಪ್ರಿಯಾಂಕ ಖರ್ಗೆ ಇನ್ನೆಂದಿಗೂ ಶಾಸಕರಾಗುವುದಿಲ್ಲ ಎಂದರು.

ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಅಡ್ಡಪಡಿಸುವ ಮಾತು ಇಡೀ ದೇಶಕ್ಕೆ ಮಾಡಿದ ಅಪಮಾನವಾಗಿದೆ, ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಿ, ಇಲ್ಲವಾದಲ್ಲಿ ನೀವು ಭಾಗವಹಿಸುವ ಸಭೆಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿದರು.

ಹರಿಪ್ರಸಾದ್ ಹಿಂಬಾಗಿಲ ಲೀಡರ್:

ಡಿ.ಕೆ.ಹರಿಪ್ರಸಾದ್ ಎಂದು ಜನರಿಂದ ಚುನಾಯಿತರಾಗಿಲ್ಲ. ಅವರು ಇಂದಿರಾ ಕುಟುಂಬದವರ ಕಾಲಿಡಿದು ನಾಮನಿರ್ದೇಶನದ ಲೀಡರ್ ಆದವರು, ಗುಜರಾತ್ ಉಸ್ತುವಾರಿ ಹೊತ್ತು ಅಲ್ಲಿ ಕಾಂಗ್ರೆಸ್‌ಅನ್ನು ನಾಮಾವಶೇಷ ಮಾಡಿದವರು ಎಂದು ಛೇಡಿಸಿದರು.

ಸಂವಿಧಾನಕ್ಕೆ ಅಪಚಾರ:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜನರ ಕುಂದುಕೊರತೆ ಆಲಿಸಲು ವಿಧಾನಸಭಾ ಕ್ಷೇತ್ರವೊಂದಕ್ಕೆ ಹೋದಾಗ ಅಲ್ಲಿನ ಶಾಸಕರನ್ನು ಕರೆಯುವುದು ಶಿಷ್ಟಾಚಾರ ಆದರೆ ಅದನ್ನು ಮೀರಿ ಸೋತವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಜನರಿಂದ ಆಯ್ಕೆಯಾದವರಿಗೆ ಮಾತ್ರವಲ್ಲ ಮತ ನೀಡಿದ ಜನರಿಗೂ ಅವಮಾನ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಶಾಸಕ ಮುನಿರತ್ನಂ ಕ್ಷೇತ್ರದಲ್ಲಿ ನಡೆದ ಘಟನೆ ಸಂಬAಧ ಉತ್ತರಿಸಿದರು.

ಚಿತ್ರ ೧೩ ಕೆ.ಎಲ್.ಆರ್. ೦೧ ; ಕೋಲಾರದಲ್ಲಿ ನಡೆದ ಆರ್‌ಎಸ್‌ಎಸ್ ನ ಪಥಸಂಚಲನದಲ್ಲಿ ತಮ್ಮ ಪುತ್ರ ಹರ್ಷಿತ್‌ರೊಂದಿಗೆ ಪಾಲ್ಗೊಂಡಿದ್ದ ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net