ಮೈಸೂರು :ರೈತರ ಎರಡು ತರಕಾರಿ ಗಾಡಿಗಳನ್ನು ವಶಪಡಿಸಿಕೊಂಡ ಹಿನ್ನೆಲೆ ಆರ್.ಟಿ ಓ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ನಗರದ ಆರ್.ಟಿ.ಓ ಕಛೇರಿ ಮುಂಭಾಗ ತರಕಾರಿ ಸುರಿದು ರೈತರು ಪ್ರತಿಭಟನೆ ನಡೆಸಿದರು. ಓವರ್ ಲೋಡ್ ಮಾಡಿದ್ದಾರೆಂದು ರೈತರ ತರಕಾರಿ ಗಾಡಿಗಳನ್ನು ಆರ್ ಟಿಒ ಅಧಿಕಾರಿಗಳು ವಶಕ್ಕೆ ಪಡೆದು ತಂದು ನಿಲ್ಲಿಸಿಕೊಂಡಿದ್ದಾರೆ. ಹೀಗಾಗಿ ವಶಪಡಿಸಿಕೊಂಡ ಗಾಡಿಗಳನ್ನು ಕೂಡಲೇ ಬಿಡುವಂತೆ ಆಗ್ರಹಿಸಿ ರೈತರು ಧರಣಿ ನಡೆಸಿದರು.