ಆರೋಪಿ ಬಂಧನ ಟೊಯೋಟೋ ಕ್ವಾಲೀಸ್ ವಶ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಬೆಂಗಳೂರಿನ ವೈಟ್‌ಫೀಲ್ಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಟಯೋಟೋ ಕ್ವಾಲೀಸ್ ಕೋಲಾರದಲ್ಲಿ ಪತ್ತೆಯಾಗಿದ್ದು, ಕಳ್ಳತನ ಮಾಡಿದ್ದ ಆರೋಪಿ ಸದ್ದಾಂಹುಸೇನ್ (೨೪) ನನ್ನು ಕೋಲಾರ ಕ್ರೆöÊಂ ಪೋಲಿಸರು ಬಂಧಿಸಿದ್ದಾರೆ.

ಬುಧವಾರ ರಾತ್ರಿ ಟೊಮೆಟೋ ಮಾರ್ಕೆಟ್ ಬಳಿ ಗಸ್ತಿನಲ್ಲಿದ್ದ ಕ್ರೆöÊಂ ಪೋಲಿಸರಿಗೆ ನಂಬರ್ ಇಲ್ಲದೇ ಇದ್ದ ಟಯೋಟೋ ಕ್ವಾಲೀಸ್ ವಾಹನ ಪತ್ತೆಯಾಗಿದೆ. ಪೋಲಿಸರನ್ನು ನೋಡಿ ಆರೋಪಿ ಕ್ವಾಲೀಸ್ ಸಮೇತ ಪರಾರಿಯಾಗಲು ಯತ್ನಿಸಿದ್ದಾನೆ. ಸುತ್ತುವರೆದ ಪೋಲಿಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದು ೫ ದಿನಗಳ ಹಿಂದೆ ವೈಟ್‌ಫೀಲ್ಡ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕ್ವಾಲೀಸನ್ನು ಕಳ್ಳತನ ಮಾಡಿಕೊಂಡು ತಾನೇ ಓಡಿಸಿಕೊಂಡು ಬಂದಿರುವುದಾಗಿ ಪೋಲಿಸರ ಮುಂದೆ ಒಪ್ಪಿಕೊಂಡಿದ್ದಾನೆ. ಕ್ವಾಲೀಸ್ ಕಳವು ಬಗ್ಗೆ ವೈಟ್‌ಫೀಲ್ಡ್ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಕ್ವಾಲೀಸ್ ನಂಬರ್ ಕೆ.ಎ.೦೩ ಎಂ.ಎಕ್ಸ್.೩೧೬೬ ಆಗಿದೆ.

ಆರೋಪಿ ಬೆಂಗಳೂರು ನಗರ ಎಂದು ಗೊತ್ತಾಗಿದೆ. ಕ್ರೆöÊಂ ಪೋಲಿಸರ ಕಾರ್ಯಾಚರಣೆಯನ್ನು ಎಸ್.ಪಿ.ಬಿ.ನಿಖಿಲ್ ಶ್ಲಾಘಿಸಿದ್ದಾರೆ. ಪಿ.ಐ.ಸದಾನಂದ ಮತ್ತು ಪಿ.ಎಸ್.ಐ. ಸೈಯದ್ ಖಾಸಿಂ ರವರು ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಚಿತ್ರ ೨೦ ಕೆ.ಎಲ್.ಆರ್. ೦೪ : ಆರೋಪಿ ಸದ್ದಾಂಹುಸೇನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net