

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ವಿಶ್ರಾಂತ ಉದ್ಯೋಗಿಗಳ ಸಂಘಗಳ ಸಹಯೋಗದಲ್ಲಿ ಅ.26ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2ರವರೆಗೆ ನಗರದ ರಾಮಕೃಷ್ಣ ವಿದ್ಯಾಕೇಂದ್ರದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಬಿ.ಆರ್.ಉಮಾಕಾಂತ್ ತಿಳಿಸಿದರು.
ಈ ವೇಳೆ ಕ್ಲಿಯರ್‌ಮೆಡಿ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ತಂಡಗಳು ಮಧುಮೇಹ, ಇಸಿಜಿ, ಕಣ್ಣಿನ ಪರೀಕ್ಷೆ ನಡೆಸಿಕೊಡಲಿವೆ. ಸಾರ್ವಜನಿಕರು ಸಹಾ ಪ್ರಯೋಜನ ಪಡೆಯಬಹುದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದಾಧಿಕಾರಿಗಳಾದ ಶ್ರೀಕಂಠನ್, ಸಿ.ಚಿಕ್ಕಲಿಂಗಸ್ವಾಮಿ, ಕೆ.ಎಂ.ಪುಟ್ಟು, ಕಾಳೇಗೌಡ, ಕ್ಲಿಯರ್ ಮೆಡಿ ಆಸ್ಪತ್ರೆಯ ಕಿರಣ, ಅನ್ನಪೂರ್ಣ ಆಸ್ಪತ್ರೆಯ ಕಾರ್ತಿಕ್ ಇದ್ದರು.