ಆರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯುತ್ತಿರುವ ಧರಣಿ ಸೋಮವಾರವೂ ಮುಂದುವರಿಯಿತು. ದಸಂಸ ಜಿಲ್ಲಾ ಅಧ್ಯಕ್ಷ ಬೆಟ್ಟಯ್ಯ ಕೋಟೆ, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕೋತ್ತೆಗಾಲ ತಿಮ್ಮಯ್ಯ, ನೆರೆ ಸಂತ್ರಸ್ತರ ಒಕ್ಕೂಟ ಸಮಿತಿಯ ಅಧ್ಯಕ್ಷ ನೀಲಮ್ಮ ಇತರರು ಇದ್ದರು.
22SARAG 1
Published on

ಸರಗೂರು: ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸೋಮವಾರ ಐದನೇ ದಿನ ಪೂರೈಸಿದ್ದು, ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಬರುವಂತೆ ಧರಣಿನಿರತರು ಆಗ್ರಹಿಸಿದರು.


ಮನೆಗಳನ್ನು ಕಳೆದುಕೊಂಡಿರುವ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದರೂ ಯಾವುದೇ ಅಧಿಕಾರಿಯೂ ಗಮನಹರಿಸಿಲ್ಲ. ಹೀಗಾಗಿ, ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಸನ್ನಿವೇಶ ಬಂದಿದೆ ಎಂದು ದಸಂಸ ಜಿಲ್ಲಾ ಅಧ್ಯಕ್ಷ ಬೆಟ್ಟಯ್ಯ ಕೋಟೆ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿದ ಡಾ ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕೋತ್ತೆಗಾಲ ತಿಮ್ಮಯ್ಯ ಮಾತನಾಡಿ, ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಮರುಪರಿಶೀಲನೆ ಮಾಡಿ ಅರ್ಹರಿಗೆ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.


ನೆರೆ ಸಂತ್ರಸ್ತರ ಒಕ್ಕೂಟ ಸಮಿತಿಯ ಅಧ್ಯಕ್ಷೆ ನೀಲಮ್ಮ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೀರ್ವಾಳ್ ಬಸವರಾಜು, ಪಪಂ ಸದಸ್ಯ ಎಸ್.ಎಲ್.ರಾಜಣ್ಣ, ಬೆಟ್ಟಸ್ವಾಮಿ, ಮಲ್ಲೇಶ್, ಎಪಿಪಿ ತಾಲೂಕು ಅಧ್ಯಕ್ಷ ಗ್ರಾಮೀಣ ಮಹೇಶ್, ದಸಂಸ ಜಿಲ್ಲಾ ಅಧ್ಯಕ್ಷ ಕೋಟೆ ಬೆಟ್ಟಯ್ಯ, ಗ್ರಾಪಂ ಸದಸ್ಯ ನಾಗರಾಜು, ದಸಂಸ ಸಂಚಾಲಕ ಇಟ್ಟ ರಾಜಣ್ಣ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net