ಆಪರೇಷನ್ ಅಭ್ಯಾಸ್ ಕೋಲಾರದಲ್ಲಿ ರೋಚಕ ಅಣುಕು ಪ್ರದರ್ಶನ/ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಚಾಲನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾ ಕಾವಾಯತು ಮೈದಾನ ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಆಪರೇಷನ್ ಅಭ್ಯಾಸ್ ಅಂಗವಾಗಿ ಗುರುವಾರ ನಾಗರೀಕ ರಕ್ಷಣಾ ಕಾರ್ಯಾಚಾರಣೆಯ ಸಂಬAಧ ಸಾರ್ವಜನಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಭೌತಿಕ ಪ್ರಾತ್ಯಕ್ಷಿಕೆಯ ಮೂಲಕ ಸರ್ಮರ್ಥವಾಗಿ ಅರಿವು ಮೂಡಿಸಲಾಯಿತು.

ನಗರದಲ್ಲಿ ಡಿ ಆರ್ ಕಾವಾಯತು ಮೈದಾನದಲ್ಲಿ ನಡೆದ ಆಪರೇಷನ್ ಅಭ್ಯಾಸ್ ನಾಗರೀಕರ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ಚಾಲನೆ ನೀಡಿದರು.

ಜನ ನಿಬಿಡ ಪ್ರದೇಶಗಳಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆ, ಅಗ್ನಿಅವಘಡ, ಬಾಂಬ್ ಸ್ಟೋಟ, ಕಟ್ಟಡ ದುರಂತ ಇತರ ಅಹಿತಕರ ಘಟನೆಗಳಿಂದ ಸಾರ್ವಜನಿಕರು ಭಯ ಭೀತರಾಗದೆ ಅರಿವು ಮೂಡಿಸುವ ಸಲುವಾಗಿ ಅಣುಕು ಪ್ರದರ್ಶನ ನಡೆಸಲಾಯಿತು.

ಜಿಲ್ಲಾಡಳಿತ, ಗೃಹರಕ್ಷದಳ, ಪೋಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಆರೋಗ್ಯ ಇಲಾಖೆ, ರೆಡ್ ಕ್ರಾಸ್, ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸು ಕೆಲಸ ಜಿಲ್ಲಾ ಮಟ್ಟದ ಅಣುಕ ಪ್ರದರ್ಶನ ನಡೆಸಲಾಯಿತು.

ಕೋಲಾರ ಗ್ರಾಮಾಂತರ ಪೋಲೀಸ್ ಠಾಣಾ ಆವರಣದಲ್ಲಿ ಅಕಸ್ಮಿಕವಾಗಿ ಡ್ರೋನ್ ದಾಳಿಯಿಂದ ಸ್ಫೋಟ ಸಂಭವಿಸಿದಾಗ ಕಟ್ಟಡದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾರ್ವಜನಿಕರನ್ನು ರಕ್ಷಿಸುವ ಅಣುಕು ಪ್ರದರ್ಶನವು ನಡೆಸಲಾಯಿತು.

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು, ತುರ್ತು ಸಂದರ್ಭಗಳಲ್ಲಿ ಪೋಲೀಸ್ ಇಲಾಖೆ, ಬಾಂಬ್ ಸ್ವ್ಕಾಡ್, ಡಾಗ್ ಸ್ಕ್ವಾಡ್, ಅಗ್ನಿ ಶಾಮಕ ದಳ, ಆರೋಗ್ಯ ಇಲಾಖೆ ಪಾತ್ರದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಭಯೋತ್ಪಾದಕರು ಕಟ್ಟಡವನ್ನು ಸುತ್ತುವರೆದು ಸಾರ್ವಜನಿರಕನ್ನು ಒತ್ತೆಯಾಗಿಸಿಕೊಂಡು, ಬಾಂಬ್ ಸ್ಟೋಟಿಸಿ ಅದರಿಂದ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸಂಭವಿಸುವ ಘಟನಾ ವಳಿಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅಣುಕು ಪ್ರದರ್ಶನ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ರಕ್ಷಣಾ ಕಾರ್ಯಗಳನ್ನು ಪ್ರದರ್ಶಿಸಲಾಯಿತು.

ಬಾಂಬ್ ಸ್ಟೋಟದ ವೇಳೆ ಸಂಭವಿಸುವ ಘಟನೆಯನ್ನು ಸಹ ಪ್ರದರ್ಶಿಸಿ, ಇದರಿಂದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಭಯೋತ್ಪಾದಕ ದಾಳಿಯನ್ನು ಕಣ್ಣಾರೆ ಕಂಡು ಸಾರ್ವಜನಿಕರು ರೋಮಾಂಚನ ಹಾಗೂ ಕುತೂಹಲದಿಂದ ವೀಕ್ಷಿಸಿದರು. ರಕ್ಷಣಾ ಸಿಬ್ಬಂದಿಯ ಚಾಕಚಕ್ಯತೆಗೆ ಸ್ಥಳದಲ್ಲಿದ್ದವರು ಬೆರಗಾದರು.

ನಂತರ ಕಾವಾಯತು ಮೈದಾನದಲ್ಲಿ ಆತಂಕವಾದಿಗಳು ಬಸ್ ಅನ್ನು ಹಾಗೂ ಪ್ರಯಾಣಿಕರನ್ನು ಒತ್ತೆಯಿರಿಸಿಕೊಂಡ ಸಂದರ್ಭದಲ್ಲಿ ನಡೆಯುವ ಘಟನಾವಳಿ ಗಳನ್ನು ರೋಚಕವಾಗಿ ಪ್ರದರ್ಶಿಸಲಾಯಿತು. ವಾಸಸ್ಥಳಗಳ ಮೇಲೆ ಡ್ರೋನ್ ದಾಳಿಯಾದಾಗಿನ ಸಂದರ್ಭಗಳನ್ನು ಸೃಷ್ಟಿಸಿ ರಕ್ಷಣಾ ಕಾರ್ಯಚರಣೆಯ ಅಣುಕು ಪ್ರದರ್ಶನ ನಡೆಸಿದರು.

ಅಣುಕು ಪ್ರದರ್ಶನದಲ್ಲಿ ಪೋಲೀಸ್ ಕಮಾಂಡೋಪಡೆ, ಎನ್.ಸಿ.ಸಿ, ಅಗ್ನಿಶಾಮಕ ದಳ, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ, ಗೃಹರಕ್ಷಣ ದಳ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಣುಕು ಕಾರ್ಯನಿರ್ವಹಿಸಿದರು.

ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಿದ ತಂಡಗಳು ಅಣುಕು ಪ್ರದರ್ಶನವನ್ನು ಕೂತುಹಲದಿಂದ ಜನರು ವೀಕ್ಷಿಸಿದರು ೧.೩೦ ಗಂಟೆಗೂ ಹೆಚ್ಚು ಕಾಲ ಅಣುಕು ಪ್ರದರ್ಶನ ಯಶಸ್ವಿಯಾಗಿ ನೆರವೇರಿತು.

ಅಣುಕು ಪ್ರದರ್ಶನದ ವೇಳೆ, ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಡಾ.ಬಿ ನಿಖಿಲ್, ಅಪರ ಪೊಲೀಸ್ ವರಿಷ್ಟಾಧಿಕಾರಿ ರವಿಶಂಕರ್, ಡಿವೈಎಸ್ಪೀ ನಾಗ್ತೆ ಜಿಲ್ಲಾ ಮೀಸಲು ಪಡೆ ಡಿವೈಎಸ್ಪಿ ಮಂಜುನಾಥ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು, ಭಾಗವಹಿಸಿದ್ದರು.

ಚಿತ್ರ ೧೫ ಕೆ.ಎಲ್.ಆರ್. ೦೫ ಆಪರೇಷನ್ ಅಭ್ಯಾಸ್ ಅಂಗವಾಗಿ ಗುರುವಾರ ನಾಗರೀಕ ರಕ್ಷಣಾ ಕಾರ್ಯಾಚಾರಣೆಯ ಸಂಬAಧ ಸಾರ್ವಜನಿಕರು ಆಪತ್ಕಾಲದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಭೌತಿಕ ಪ್ರಾತ್ಯಕ್ಷಿಕೆಯ ಮೂಲಕ ಸರ್ಮರ್ಥವಾಗಿ ಅರಿವು ಮೂಡಿಸಲಾಯಿತು.

ಚಿತ್ರ ೧೫ ಕೆ.ಎಲ್.ಆರ್. ೦೫ಅ ಬಸ್ ಅನ್ನು ಹಾಗೂ ಪ್ರಯಾಣಿಕರನ್ನು ಒತ್ತೆಯಿರಿಸಿಕೊಂಡ ಸಂದರ್ಭದಲ್ಲಿ ನಡೆಯುವ ಘಟನಾವಳಿ ಗಳನ್ನು ರೋಚಕವಾಗಿ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net