ಆನಂದಪುರ ಕೆಪಿಎಸ್ ಅಭಿವೃದ್ಧಿಗೆ ಕ್ರಮ

10-ANP-P1 school
ಆನಂದಪುರ ಕೆಪಿಎಸ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಕಾಶ್ ರುಕ್ಮಯ್ಯ, ರಮೇಶ, ಪರಶುರಾಮಪ್ಪ, ರವಿಶಂಕರ, ಈಶ್ವರಪ್ಪ, ರಾಮಚಂದ್ರ ಇತರರಿದ್ದರು.
Published on

ಆನಂದಪುರ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಸಮಗ್ರ ಅಭಿವೃದ್ಧಿ ಕಾರ್ಯ ಎರಡು ವರ್ಷಗಳಲ್ಲಿ ಪೂರ್ಣವಾಗಲಿದೆ ಎಂದು ಬೆಂಗಳೂರಿನ ರೇಕ್ಯೊ ಸಂಸ್ಥೆಯ ಸಿಇಒ ಪ್ರಕಾಶ್ ರುಕ್ಮಯ್ಯ ತಿಳಿಸಿದರು.

ಸೋಮವಾರ ಶಾಲಾ ಆವರಣದಲ್ಲಿ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮದಡಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, ಇದು ನಾನು ಓದಿದ ಶಾಲೆ. ಹೀಗಾಗಿ ಇದರ ಅಭಿವೃದ್ಧಿಗೆ ತಾನು ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗೆ ಬೇಡಿಕೆ ಇಟ್ಟಾಗ ಉತ್ತಮ ಪ್ರತಿಕ್ರಿಯೆ ಮತ್ತು ಹಣ ಮಂಜೂರಾತಿ ದೊರೆತಿದೆ ಎಂದರು.

ರೇಕ್ಯೊ ಸಂಸ್ಥೆ 1.60 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಸಿದೆ. ಮುಂದಿನ ಎರಡು ವರ್ಷಗಳಲ್ಲಿ ಹೈಟೆಕ್ ಗ್ರಂಥಾಲಯ, ಪ್ರಯೋಗಾಲಯ, ಶೌಚಗೃಹ ನಿರ್ಮಾಣವಾಗಲಿದೆ. ಈಗಾಗಲೇ ಕೊಠಡಿಗೂ ಸ್ಮಾರ್ಟ್ ಬೋರ್ಡ್, ಶಾಲಾ ಧ್ವಜದ ಕಟ್ಟೆಯ ಸುತ್ತ ಇಂಟರ್ ಲಾಕ್ ಟೈಲ್ಸ್ ಅಳವಡಿಕೆ, ಕಾಂಕ್ರಿಟ್ ರಸ್ತೆ, ಸುಸಜ್ಜಿತ ಭೋಜನಾಲಯ ನಿರ್ಮಾಣವಾಗಿದೆ ಎಂದು ಹೇಳಿದರು.

ಡಿಡಿಪಿಯು ಚಂದ್ರಪ್ಪ ಗುಂಡುಪಲ್ಲಿ ಮಾತನಾಡಿ, ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಪರಿಶ್ರಮದಿಂದ ಸರ್ಕಾರಿ ಶಾಲೆ ಅಭಿವೃದ್ಧಿ ಸಾಧ್ಯ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾಗರ ಬಿಇಒ ಪರಶುರಾಮಪ್ಪ, ಕೆಪಿಎಸ್ ಪ್ರಾಚಾರ್ಯ ರವಿಶಂಕರ, ಉಪ ಪ್ರಾಚಾರ್ಯ ಈಶ್ವರಪ್ಪ, ಗ್ರಾಪಂ ಅಧ್ಯಕ್ಷ ಕೆ.ಗುರುರಾಜ್, ರೇಕ್ಯೊ ಸಂಸ್ಥೆಯ ರಮೇಶ, ಶಾಲಾ ಸಮಿತಿ ಉಪಾಧ್ಯಕ್ಷ ರಾಮಚಂದ್ರ, ಸದಸ್ಯ ಉಮೇಶ, ರಂಗನಾಥ, ಜಗದೀಶ, ಜಗನ್ನಾಥ ಗ್ರಾಪಂ ಸದಸ್ಯರಾದ ಗಜೇಂದ್ರ ಯಾದವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net