ಆದಿವಾಸಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಡಾ.ಎಸ್.ರತ್ನಮ್ಮ ಮನವಿ

18
Published on

ಸರ್ಕಾರವು ಆದಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಬುಡಕಟ್ಟು ಪರ ಹೋರಾಟಗಾರ್ತಿ ಡಾ.ಎಸ್.ರತ್ನಮ್ಮ ಮನವಿ ಮಾಡಿದರು.

‘ಆದಿವಾಸಿ ಸಮುದಾಯಗಳ ವರ್ತಮಾನದ ತಲ್ಲಣಗಳು/ಎದುರಿಸುವ ಮಾರ್ಗಗಳು’ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿವಾಸಿಗಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರೋತ್ಸಾಹಿಸುವ ದೃಷ್ಟಿಯಿಂದ ಇನ್ನೂ ಹೆಚ್ಚಿನ ಯೋಜನೆಗಳನ್ನು ಜಾರಿ ಮಾಡಬೇಕು ಎಂದರು.

ಪ್ರಸ್ತುತ ದಿನಗಳಲ್ಲಿಯೂ ಕಾಡಿನ ಮಧ್ಯ ಹಾಗೂ ಬೆಟ್ಟಗುಡ್ಡಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರನ್ನು ನೋಡುತ್ತಿದ್ದೇವೆ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗಬೆಟ್ಟ, ಗೋಪಾಲ ಸ್ವಾಮಿ ಬೆಟ್ಟ, ಕರಾವಳಿ ಪ್ರದೇಶಗಳು, ಮಲೆನಾಡು ಪ್ರದೇಶ ಹಾಗೂ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಬುಟಕಟ್ಟುಗಳು ಕಂಡುಬರುತ್ತದೆ ಎಂದು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದ ಹಾಲಂಬಾಡಿ ಗ್ರಾಮದಲ್ಲಿರುವ 55 ಸೊಲಿಗ ಸಮುದಾಯ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಮತಹಾಕಬಾರದೆಂದು ಇನ್ನೊಂದು ಸಮುದಾಯವು ಅವರಿಗೆ ಬಹಿಷ್ಕಾರ ಹಾಕುವ ಬೆದರಿಕೆ ಹಾಕಲಾಗುತ್ತಿದೆ. ಸರ್ಕಾರ ಇತ್ತಿಚೇಗೆ ಅವರಿಗೆ ಪೌಷ್ಟಿಕ ಆಹಾರವನ್ನು ನೀಡುತ್ತಿದೆ. ಒಂದು ವೇಳೆ ಮತ ಹಾಕದಿದ್ದರೆ ಆ ಪೌಷ್ಟಿಕ ಆಹಾರವು ಸಿಗುವುದಿಲ್ಲ ಎಂಬ ತಲ್ಲಣದಲ್ಲಿದ್ದಾರೆ ಎಂದರು. ಅಲೆಮಾರಿ ಸಮುದಾಯಗಳ ಸಮಕಾಲೀನ ಬಿಕ್ಕಟುಗಳ ಕುರಿತು ಚಿಂತಕ ಸಂಸ್ಕೃತಿ ಚಿಂತಕ ಡಾ.ಎಚ್.ಆರ್.ಸ್ವಾಮಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net