ಆದಿವಾಸಿಗಳ ಕಡೆಗಣನೆ ವಿಷಾದನೀಯ

ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಆದಿವಾಸಿಗಳ ಹಾಡಿಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಡಾ.ಎಸ್.ಶ್ರೀಕಾಂತ್, ಸಾಕಮ್ಮ, ಕರಿಯ, ಡಾ.ಪ್ರತಿಭ, ಪ್ರೊ.ನರಸಿಂಹಮೂರ್ತಿ ಮತ್ತು ವಿದ್ಯಾರ್ಥಿಗಳಿದ್ದಾರೆ.
ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಆದಿವಾಸಿಗಳ ಹಾಡಿಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಡಾ.ಎಸ್.ಶ್ರೀಕಾಂತ್, ಸಾಕಮ್ಮ, ಕರಿಯ, ಡಾ.ಪ್ರತಿಭ, ಪ್ರೊ.ನರಸಿಂಹಮೂರ್ತಿ ಮತ್ತು ವಿದ್ಯಾರ್ಥಿಗಳಿದ್ದಾರೆ.
Published on

ಹುಣಸೂರು: ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಪರಂಪರೆ, ಸಂಸ್ಕೃತಿ ಮತ್ತು ಜೀವನಶೈಲಿ ಸಂಪದ್ಭರಿತವಾಗಿದ್ದು, ಸರ್ಕಾರಳು ಆದಿವಾಸಿಗಳನ್ನು ಕಡೆಗಣಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಅಭಿಪ್ರಾಯಪಟ್ಟರು.

ನಗರದ ಡಿ.ದೇವರಾಜ್ ಅರಸು ಸರ್ಕಾರಿ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಅಧ್ಯಾಪಕ ಡಾ.ಪ್ರತಿಭಾ ಮತ್ತು ಪ್ರೊ.ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ಸಮಾಜ ಮತ್ತು ಬುಡಕಟ್ಟು ಜನಾಂಗ ವಿಷಯ ಕುರಿತಾದ ಕ್ಷೇತ್ರ ಅಧ್ಯಯನಕ್ಕಾಗಿ ತಾಲೂಕಿನ ಕೊಟ್ಟಿಗೆ ಕಾವಲ್ ಮತ್ತು ಕಾಳೇನಹಳ್ಳಿ ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ್ದ ಸಂದರ್ಭ ಆದಿವಾಸಿಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.

ಕಾಡನ್ನು ತಲತಲಾಂತರದಿಂದ ಉಳಿಸಿ ಬೆಳೆಸಿದ ಸಮುದಾಯ ಆದಿವಾಸಿ ಸಮುದಾಯವಾಗಿದೆ. ಕಾಡು ಅವರ ಜೀವನ, ಕಾಡೇ ಅವರ ಪದ್ಧತಿ, ಕಾಡು ಅವರ ದೇವರು, ಕಾಡು ಅವರ ಉಸಿರು. ಸ್ವಾತಂತ್ರ್ಯಾನಂತರ ಅರಣ್ಯ ಸಂರಕ್ಷಣೆ, ರಕ್ಷಿತಾರಣ್ಯ ಮುಂತಾದ ಕಾರಣಗಳನ್ನೊಡ್ಡಿ, ಕಾಡಿನಿಂದ ಅದಿವಾಸಿಗಳನ್ನು ಹೊರದಬ್ಬಲಾಯಿತು. ಅವರ ಪುನರ್ವಸತಿ ಇಂದಿಗೂ ಕನಸಿನ ಗಂಟಾಗಿದೆ. ಮುಖ್ಯವಾಹಿನಿಗೆ ಅವರನ್ನು ತರುವ ಉದ್ದೇಶ ಹೊಂದಿದ ಸರ್ಕಾರಗಳು ಅದರತ್ತ ಗಂಭೀರ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರದ ಪರಿಣಾಮ ಅದಿವಾಸಿಗಳು ಅಡಕತ್ತರಿಯಲ್ಲಿ ಬದುಕು ಸವೆಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿ, ಆದಿವಾಸಿಗಳು ತಮ್ಮ ಹಕ್ಕು ಪ್ರತಿಪಾದನೆ ಹಾಗೂ ಜವಾಬ್ದಾರಿ ನಿರ್ವಹಣೆಯಲ್ಲಿ ಡೀಡ್ ಸಂಸ್ಥೆ ನಿರಂತರವಾಗಿ ಕಳೆದ 5 ದಶಕಗಳಿಂದ ಬೆನ್ನೆಲುಬಾಗಿ ನಿಂತಿದೆ. ಕಾಡನಿಂದ ಹೊರದೂಡಲ್ಪಟ್ಟ 3418 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿ 8 ವರ್ಷಗಳೇ ಸಂದರೂ ರಾಜ್ಯ ಸರ್ಕಾರಗಳು ನ್ಯಾಯಾಲಯದ ಆದೇಶವನ್ನು ಕಡೆಗಣಿಸಿರುವುದು ಖಂಡನೀಯ ಎಂದರು. ಭೇಟಿ ವೇಳೆ ಆದಿವಾಸಿ ಮುಖಂಡರಾದ ಸಾಕಮ್ಮ, ಕರಿಯ ಹಾಗೂ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net