ಆದಿವಾಸಿ ಕರಿಯಪ್ಪ ಅಂತ್ಯಕ್ರಿಯೆ

14HDK1
ಎಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿ ಹಾಡಿಗೆ ಎಚ್.ವಿಶ್ವನಾಥ್ ಮಾಜಿ ಶಾಸಕ ಚಿಕ್ಕಣ್ಣ ಜತೆ ಕರಿಯಪ್ಪ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಆದಿವಾಸಿ ಜನರೊಡನೆ ಸಮಾಲೋಚನೆ ನಡೆಸಿದರು.
Published on

ಎಚ್.ಡಿ.ಕೋಟೆ: ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಹಲ್ಲೆಯಿಂದ ಮೃತಪಟ್ಟ ಹೊಸಹಳ್ಳಿ ಹಾಡಿಯ ಜೇನು ಕುರುಬ ಜನಾಂಗದ ಕರಿಯಪ್ಪ ಮೃತದೇಹವನ್ನು ಶುಕ್ರವಾರ ಅಂತ್ಯಸಂಸ್ಕಾರ ಮಾಡಲಾಯಿತು.


ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗುರುವಾರ ರಾತ್ರಿ ಮೃತದೇಹವನ್ನು ಹಾಡಿಗೆ ತರಲಾಯಿತು. ಅರಣ್ಯ ಮಧ್ಯದಲ್ಲಿ ಇರುವ ಸ್ಮಶಾನ ಇರುವ ಕಾರಣ ಮೃತನ ಸಂಬಂಧಿಕರು ಶುಕ್ರವಾರ ಅಂತ್ಯಕ್ರಿಯೆ ಮಾಡುವುದಾಗಿ ತಿಳಿಸಿದ್ದರು. ಶುಕ್ರವಾರ ಜೇನು ಕುರುಬ ಸಮುದಾಯದ ಸಂಪ್ರದಾಯದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮಧ್ಯಾಹ್ನ ಶವಸಂಸ್ಕಾರ ನಡೆಸಲಾಯಿತು.

ಎಚ್.ವಿಶ್ವನಾಥ್ ಸಾಂತ್ವನ: ರಾಜ್ಯದಲ್ಲಿ ಅಮಾಯಕ ಜನರ ಮೇಲಿನ ಅಧಿಕಾರಿಗಳ ದೌರ್ಜನ್ಯ ಮಿತಿಮೀರಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಹೊಸಹಳ್ಳಿ ಹಾಡಿಯ ಅರಣ್ಯ ಇಲಾಖೆ ನೌಕರರ ದೌರ್ಜನ್ಯದಿಂದ ಮೃತ ಕರಿಯಪ್ಪನ ಅಂತಿಮ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಮಾತನಾಡಿ, ಮೊದಲು ಅರಣ್ಯ ಇಲಾಖೆ ಆದಿವಾಸಿ ಜನರಿಗೆ ಮೂಲಸೌಲಭ್ಯಗಳನ್ನು ಕೊಡಬೇಕು. ಅದರ ಬಗ್ಗೆ ಆಲೋಚನೆ ಮಾಡಲಿ, ಅದು ಬಿಟ್ಟು ದೌರ್ಜನ್ಯ ಮಾಡುವುದನ್ನು ಬಿಡಬೇಕು ಎಂದರು.

ಇಂತಹ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಹ ಬರಬೇಕು. ಕೇವಲ ದಸರಾ ಮಾಡಲು ಸಚಿವರಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ತಹಸೀಲ್ದಾರ್ ರತ್ನಾಂಬಿಕಾ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಜಿ.ಮಹೇಂದ್ರ, ಬೀರಂಬಳ್ಳಿ ಪ್ರಭಾಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net