

ಬೆಳಗಾವಿ: ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿರುವ ಹಾಗೂ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಆದಿತ್ಯ ಮಿಲ್ಕ್ ಕಂಪನಿಯು ಶೀಘ್ರದಲ್ಲಿಯೇ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಆದಿತ್ಯ ಮಿಲ್ಕ್‌ನ ನಿರ್ದೇಶಕಿ ದೀಪಾ ಸಿದ್ನಾಳ ಮಾಹಿತಿ ನೀಡಿದರು.
ಇತ್ತೀಚೆಗೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಆದಿತ್ಯ ಮಿಲ್ಕ್‌ನ ‘ಊರ್ಜಾ ಸ್ಕೀಮ್’ ಕಾರ್ಯಕ್ರಮದಲ್ಲಿ ವಿತರಕರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಆದಿತ್ಯ ಮಿಲ್ಕ್ ವತಿಯಿಂದ ಟೆಟ್ರಾ ಪ್ಯಾಕ್ ಹಾಲು, ಬಟರ್, ಚೀಜ್, 10 ರೂ. ಮೌಲ್ಯದ ಸುವಾಸನೆ ಭರಿತ ಹಾಲು ಸೇರಿದಂತೆ ಅನೇಕ ಉತ್ಪನ್ನ ತಯಾರಿಸಲು ಕಂಪನಿ ಚಿಂತನೆ ನಡೆಸಿದೆ.
ಈಗಾಗಲೇ ನಮ್ಮ ಕಂಪನಿಯೂ ಅಂತಾರಾಷ್ಟ್ರೀಯ ಗುಣಮಟ್ಟದ ಪನೀರ್ ತಯಾರಿಸುತ್ತಿದ್ದು, ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ಲಭಿಸಿದೆ. ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಇನ್ನೂ ಅನೇಕ ಹೊಸ ಉತ್ಪನ್ನ ತಯಾರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು. ಉತ್ತಮವಾಗಿ ಕಾರ್ಯನಿರ್ವಹಿಸಿದ ಆದಿತ್ಯ ಮಿಲ್ಕ್ ವಿತರಕರಿಗೆ ಹೊಂಡಾ ಆಕ್ಟೀವಾ, ಲ್ಯಾಪ್‌ಟಾಪ್, ವಾಷಿಂಗ್ ಮಷಿನ್ ಸೇರಿ ವಿವಿಧ ಬಹುಮಾನಗಳನ್ನು ದೀಪಾ ಸಿದ್ನಾಳ ವಿತರಿಸಿದರು. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆದಿತ್ಯ ಮಿಲ್ಕ್‌ನ ವಿತರಕರು ಆಗಮಿಸಿದ್ದರು.