

ಚಿತ್ರುದುರ್ಗ: ಪ್ರಸಕ್ತ ಸಾಲಿನ ಆದರ್ಶ ವಿದ್ಯಾಲಯ ಚಳ್ಳಕೆರೆ,ಮೊಳಕಾಲ್ಮೂರು ತಾಲೂಕುಗಳ 7,8,9 ನೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳ ಭರ್ತಿಗೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಜೂನ್ 24ಕ್ಕೆ ಮುಂದೂಡಲಾಗಿದೆ. ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕರ ಸೂಚನೆಯಂತೆ ಪ್ರವೇಶ ಪರೀಕ್ಷೆ ಜೂ.20ಕ್ಕೆ ನಿಗದಿ ಆಗಿತ್ತು. ಆದರೆ ಎಸ್‌ಎಸ್‌ಎಲ್‌ಸಿ-2 ಪರೀಕ್ಷೆಯ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಿಡಿಪಿಐ ಕಚೇರಿ,ಚಳ್ಳಕೆರೆ,ಮೊಳಕಾಲ್ಮೂರು ಬಿಇಒ,ಬಿಆರ್‌ಸಿ ಹಾಗೂ ತಾಲೂಕು ಆದರ್ಶ ವಿ ದ್ಯಾಲಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದೆಂದು ಡಯಟ್‌ಉಪನಿರ್ದೇಶಕ ಎಂ.ನಾಸಿರುದ್ದೀನ್ ತಿಳಿಸಿದ್ದಾರೆ.