ಆತ್ಮಸ್ಥೈರ್ಯ ಉತ್ತಮ ಫಲಿತಾಂಶಕ್ಕೆ ಅಗತ್ಯ

CTD BALABAVANA
Published on

ಚಿತ್ರದುರ್ಗ:ಮಕ್ಕಳು ಪುಸ್ತಕಗಳನ್ನು ಪ್ರೀತಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ,ಜಿಲ್ಲಾ ಬಾಲಭವನ ಸಮಿತಿ ಸದಸ್ಯ ಡಾ.ಬಿ.ಎಂ.ಗುರುನಾಥ್ ಹೇಳಿದರು. ರಾಜ್ಯಬಾಲಭವನ ಸೊಸೈಟಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ಸಂಪಿಗೆ ಸಾಂಸ್ಕೃತಿಕ ಸಾಮಾಜಿಕ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಶನಿವಾರ ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ 6ರಿಂದ 16 ವರ್ಷದೊಳಗಿನ ಮಕ್ಕಳ ವಾರಾಂತ್ಯ ಚಟುವಟಿಕೆಗಳ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ,ಪರೀಕ್ಷೆಗಳಲ್ಲಿ ಕ್ರಿಯಾಶೀಲವಾಗಿ ಬರೆದು ಉತ್ತಮ ಫಲಿತಾಂಶ ಪಡೆ ಯಲು ಆತ್ಮಸ್ಥೈರ್ಯ,ಶ್ರಮ ಬಹಳ ಮುಖ್ಯ. ಆಧುನಿಕ ಜೀವನ ಶೈಲಿ ಮತ್ತು ವಾಣಿಜ್ಯೀಕರಣದಿಂದ ಸಂಬಂಧಗಳಲ್ಲಿ ಬಿರುಕು ಮೂಡುತ್ತಿ ದೆ. ಇವತ್ತಿನ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರ ಮಾರ್ಗದರ್ಶನದ ಕೊರತೆಯಾಗಿದೆ ಎಂದರು.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪ ಪ್ರಾಂಶುಪಾಲ ಕರಿಯಪ್ಪ ಮಾತನಾಡಿ,ಸೌಲಭ್ಯಗಳನ್ನು ಬಳಸಿಕೊಂಡು ವಿನ ಯ ಮತ್ತು ಕ್ರಿಯಾಶೀಲತೆಯಿಂದ ಬದುಕನ್ನು ಕಟ್ಟಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜಿಲ್ಲಾ ಬಾಲ ಭವನ ಕಾರ‌್ಯಕ್ರಮ ಸಂ ಯೋಜಕ ಡಿ.ಶ್ರೀಕುಮಾರ್ ಮಾತನಾಡಿದರು. ಆಶು ಭಾಷಣ,ಗಾಯನ ಮತ್ತು ಪ್ರಬಂಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿಜಯಕುಮಾರ್, ಮಹಮದ್‌ಖಾನಂ, ಮುಕ್ತಾಯಿ,ಗಂಗೂಬಾಯಿ ಇದ್ದರು. ಶಿಕ್ಷಕ ಕಲ್ಲೇಶ್ ಡಿ.ಮೌರ್ಯ ನಿ ರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net