ಆಕಾಶಬುಟ್ಟಿಗಳ ಆಕರ್ಷಣೆ

Untitled
Published on

ದೀಪಾವಳಿ ಹಬ್ಬದ ಪ್ರಯುಕ್ತ ಆಕಾಶದಲ್ಲಿ ಬೆಳಗುತ್ತ ಸ್ವಚ್ಛಂದವಾಗಿ ಹಾರಾಡುವ ವೈವಿಧ್ಯಮಯ ಆಕಾಶಬುಟ್ಟಿಗಳು ಗ್ರಾಹಕರನ್ನು ಆಕರ್ಷಸುತ್ತಿವೆ.

ಬಹಳ ಹಿಂದಿನಿಂದಲೂ ಆಕಾಶಬುಟ್ಟಿ ಇತ್ತು. ಇದನ್ನು ಹೊತ್ತಿಸಿ ಆಕಾಶಕ್ಕೆ ಬಿಟ್ಟರೆ ಅದು ಆಗಸದಲ್ಲಿ ಮಿನುಗುತ್ತಾ ತೇಲುತ್ತಿತ್ತು. ಹಲವು ಆಕಾಶಬುಟ್ಟಿಗಳನ್ನು ಏಕಕಾಲಕ್ಕೆ ಬಿಟ್ಟರೆ ಕತ್ತಲ ಆಗಸದಲ್ಲಿ ತೇಲುವ ಇವುಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಅಪರೂಪದ ಸಂಗತಿಯಾಗಿತ್ತು. ಆದರೆ ಹಸಿರು ಪಟಾಕಿ ಹೆಚ್ಚಾದಂತೆ ಆಕಾಶಬುಟ್ಟಿಗೂ ಡಿಮಾಂಡ್ ಕಂಡುಬಂತು. ಇಂದು ಸಾರ್ವಜನಿಕರು ಆಕಾಶದಲ್ಲಿ ಹಾರಿಬಿಡುವ ಆಕಾಶಬುಟ್ಟಿಗಳ ಜತೆಗೆ ಮನೆಯ ಮುಂದೆಯೂ ತೂಗು ಹಾಕುತ್ತಾರೆ. ನಗರದ ಶಿವರಾಂಪೇಟೆ, ಜೆಕೆ ಮೈದಾನ, ಕುವೆಂಪುನಗರ, ಹೆಬ್ಬಾಳು, ದಟ್ಟಗಳ್ಳಿ, ಸರಸ್ವತಿಪುರಂ, ವಿವೇಕಾನಂದನಗರದ ಸೇರಿದಂತೆ ಎಲ್ಲೆಡೆ ಆಕಾಶಬುಟ್ಟಿ ಮಾರಾಟ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net