ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳವು

Sanjivi Hanuman 8 APR 20
Published on

ಉಳ್ಳಾಗಡ್ಡಿ-ಖಾನಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದೇವರ ಬೆಳ್ಳಿ ಕಿರೀಟ ಹಾಗೂ ಎರಡು ಬೆಳ್ಳಿ ಹಾರಗಳನ್ನು ಕಳ್ಳರು ದೋಚಿದ್ದಾರೆ.

1.1 ಕೆ.ಜಿ. ತೂಕದ ಬೆಳ್ಳಿ ಕಿರೀಟ, 1.7 ಹಾಗೂ 100 ಗ್ರಾಂ ತೂಕದ ಎರಡು ಬೆಳ್ಳಿ ಹಾರ ಕಳ್ಳತನವಾಗಿದೆ. ಭಾನುವಾರ ಬೆಳಗ್ಗೆ ಅರ್ಚಕ ಶ್ರೀಮಂತ ಗುರವ ಪೂಜೆಗೆಂದು ತೆರಳಿದಾಗ ದೇವಾಲಯದ ಬಾಗಿಲು ಮುರಿದಿತ್ತು. ಒಳ ಪ್ರವೇಶಿಸಿ ಪರಿಶೀಲಿಸಿದಾಗ ದೇವರ ಮೂರ್ತಿಗೆ ಹಾಕಿದ್ದ ಬೆಳ್ಳಿ ಆಭರಣ ಕಳುವಾಗಿರುವುದು ತಿಳಿದಿದೆ.

ಸ್ಥಳಕ್ಕೆ ಯಮಕನಮರಡಿ ಪಿಎಸ್‌ಐ ಬಿ.ವಿ. ನ್ಯಾಮಗೌಡರ ಭೇಟಿ ನೀಡಿ ಪರಿಶೀಲಿಸಿದರು. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net