ಆಂಗ್ಲ ಮಾಧ್ಯಮ ಶಾಲೆ ಗೆ ವಿರೋಧ

dc-Cover-qjq3q577gso4p4r4tob56g0t00-20171103012249.Medi
Published on

ಬೆಂಗಳೂರು
ರಾಜ್ಯ ಸರ್ಕಾರ ಹೊಸದಾಗಿ 1,400 ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಮುಂದಾಗಿರುವುದಕ್ಕೆ ಕನ್ನಡ ಗೆಳೆಯ ಬಳಗ ವಿರೋಧ ವ್ಯಕ್ತಪಡಿಸಿದೆ.
ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡಿ ಕನ್ನಡಕ್ಕೆ ದಕ್ಕೆ ಉಂಟು ಮಾಡಿದ್ದರು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅದೇ ಹಾದಿಯನ್ನು ತುಳಿದಿದ್ದಾರೆ. 1,400(1,000 ಕನ್ನಡ ಶಾಲೆ ಮತ್ತು 400 ಉರ್ದು ಶಾಲೆ)ಶಾಲೆಗಳಲ್ಲಿ 1ನೇ ತರಗತಿಯಿಂದ ಹೊಸದಾಗಿ ಆಂಗ್ಲ ಮಾಧ್ಯಮ ತೆರೆಯಲು ಹೊರಟಿರುವುದು ಅಘಾತಕಾರಿಯಾದ ವಿಷಯ. ಇದು ಕನ್ನಡ ಭವಿಷ್ಯಕ್ಕೆ ಮಾರಕವಾಗಲಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ವಿರುದ್ಧವಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಮಾಧ್ಯಮಕ್ಕೆ ಮಹತ್ವ ಕೊಟ್ಟಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಉಪರಾಷ್ಟ್ರಪತಿ ಅವರು ಕೂಡ ಇದನ್ನೇ ಉಚ್ಛರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಂಗ್ಲ ಭಾಷೆ ಶಿಕ್ಷಣ ನೀಡಲು ಮುಂದಾಗಿರುವುದು ವಿಷಾದದ ಸಂಗತಿಯಾಗಿದೆ.
ಕನ್ನಡದ ಬಗ್ಗೆ ಕಾಳಜಿಯುಳ್ಳ ಸಂವೇದನಾಶೀಲ ಬರಹಗಾರರಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವನ್ನು ಪುರಸ್ಕರಿಸಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಯುವ ನಿರ್ಧಾರವನ್ನು ಕೈ ಬಿಟ್ಟು ಖಾಸಗಿ ಶಾಲೆಗಳಲ್ಲೂ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ರದ್ದಾಗುವಂತೆ ಕ್ರಮವಹಿಸಬೇಕೆಂದು ಕನ್ನಡ ಗೆಳೆಯ ಬಳಗ ಸಂಚಾಲಕ ರಾ.ನಂ.ಚಂದ್ರಶೇಖರ ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net