ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಮಾವು ಬೆಳೆಗಾರರಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಸರ್ಕಾರ ಘೋಷಿಸಿರುವ ೪ ರೂ.ಗಳ ಪರಿಹಾರ ಹಣ ಆ.೩೦ ರೊಳಗಾಗಿ ಎಲ್ಲಾ ರೈತರ ಕೈಸೇರುವ ನಿರೀಕ್ಷೆ ಇದ್ದು, ಈಗಾಗಲೇ ೭೫೦೦ ರೈತರ ಅರ್ಜಿಗಳಿಗೆ ಹಣ ಬಿಡುಗಡೆಯಾಗಿದ್ದು, ಇನ್ನು ೧೦ ಸಾವಿರ ರೈತರ ಅರ್ಜಿಗಳಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಅರ್ಜಿಗಳ ಪರಿಶೀಲನೆ ಕಾರ್ಯ ಮುಗಿದಿರುವುದರಿಂದ ಎಲ್ಲಾ ರೈತರಿಗೂ ಈ ತಿಂಗಳ ಅಂತ್ಯದೊಳಗಾಗಿ ರೈತರ ಖಾತೆಗಳಿಗೆ ಸರ್ಕಾರ ಘೋಷಣೆ ಮಾಡಿರುವ ೪ ರೂ.ಗಳ ಬೆಂಬಲ ಬೆಲೆ ಸಿಗಲಿದೆ ಎಂದು ಇಲಾಖೆ ಮೂಲಗಳು ಸ್ವಷ್ಟಪಡಿಸಿವೆ.
ಸರ್ಕಾರ ೨ ಹಂತಗಳಲ್ಲಿ ಹಣ ಘೋಷಣೆ ಮಾಡಿದ ಕಾರಣ ರೈತರ ಖಾತೆಗಳಿಗೆ ಪರಿಹಾರ ಹಣ ಜಮಾ ಆಗಲು ವಿಳಂಭವಾಗಿದೆ. ಮೊದಲು ಒಬ್ಬ ರೈತನಿಗೆ ೧೦ ಟನ್ ಖರೀದಿಗೆ ಮಾತ್ರ ೪ ರೂ.ಗಳಂತೆ ಬೆಂಬಲ ಬೆಲೆ ನೀಡಲು ಸರ್ಕಾರ ನಿಗಧಿಪಡಿಸಿತ್ತು. ೨ನೇ ಹಂತದಲ್ಲಿ ೨೦ ಟನ್‌ಗಳ ಖರೀದಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ ಕಾರಣ ರೈತರು ೨ ಹಂತಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ ಕಾರಣ, ಅರ್ಜಿಗಳ ಪರಿಶೀಲನೆ ವಿಳಂಭವಾದ ಕಾರಣ ರೈತರ ಖಾತೆಗಳಿಗೆ ಹಣ ಜಮಾ ಆಗಲು ತಡವಾಗಿದೆ.
ಆ.೨೨ ಕ್ಕೆ ಅರ್ಜಿಗಳ ಪರಿಶೀಲನೆ ಕಾರ್ಯ ಮುಗಿದಿರುವುದರಿಂದ ಇನ್ನೂ ರೈತರ ಖಾತೆಗಳಿಗೆ ಹಣ ಜಮಾ ಮಾಡುವುದು ಬಾಕಿ ಇರುವುದರಿಂದ ಸೋಮವಾರದಿಂದ ಉಳಿದ ೧೦ ಸಾವಿರ ಅರ್ಜಿಗಳಿಗೆ ಹಣ ಬಿಡುಗಡೆ ಮಾಡುವ ಕಾರ್ಯ ಮುಂದುವರೆಯಲಿದ್ದು, ಎಲ್ಲಾ ರೈತರಿಗೂ ೪ ರೂ.ಗಳ ಬೆಂಬಲ ಬೆಲೆ ಕೈಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ತಿಳಿಸಿದ್ದಾರೆ.
ಕೋಟ್
ಆ.೨೨ ರಂದು ಮ್ಯಾಂಗೋ ಬೋರ್ಡ್ ಎಂ.ಡಿ ರವರನ್ನು ಭೇಟಿ ಮಾಡಲಾಗಿದೆ. ರೈತರ ಎಲ್ಲಾ ಅರ್ಜಿಗಳ ಪರಿಶೀಲನೆ ಮಾಡುವುದು ವಿಳಂಭವಾಗಿತ್ತು. ಅರ್ಜಿಗಳ ವಿಲೇವಾರಿ ಕಾರ್ಯ ಮುಗಿದಿದೆ. ಇನ್ನು ಒಂದು ವಾರದಲ್ಲಿ ಬೆಂಬಲ ಬೆಲೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗು ೪ ರೂ.ಗಳ ಹಣ ಖಾತೆಗೆ ಬೀಳಲಿದೆ. ಇದು ರೈತರ ಹೋರಾಟದ ಫಲವಾಗಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸಿ ಇನ್ನು ಒಂದು ತಿಂಗಳ ಮುಂಚಿತವಾಗಿಯೇ ಮಾಡಿದ್ದರೆ ಎಲ್ಲಾ ಬೆಳೆಗಾರರಿಗೆ ಅನ್ವಯವಾಗುತ್ತಿತ್ತು. ಆದರೆ ತಡವಾಗಿ ಮಾಡಿದರು. ಕೆಲವು ರೈತರಿಗೆ ಬೆಂಬಲ ಬೆಲೆ ಸಹಾಯವಾಗಿದೆ.
-ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಅಧ್ಯಕ್ಷ
ಕೋಟ್
ಬೆಳೆಗಾರರು ಸಲ್ಲಿಸಿರುವ ಬಿಲ್ಲುಗಳ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿತ್ತು. ಆದ್ದರಿಂದ ತಡವಾಯಿತು. ಎಲ್ಲಾ ಬಿಲ್ಲುಗಳ ಪರಿಶೀಲನಾ ಕಾರ್ಯ ಮುಗಿದಿದೆ. ಶೀಘ್ರವೇ ಎಲ್ಲಾ ಬೆಳೆಗಾರರಿಗೆ ಬಿಲ್ ಪಾವತಿಯಾಗಲಿದೆ. ಕಳೆದ ಒಂದು ವಾರದ ಹಿಂದೆ ೪ ಸಾವಿರ ಬಿಲ್ಲುಗಳಿಗೆ ೯ ಕೋಟಿ ರೂ.ಗಳು ಪಾವತಿಸಲಾಗಿದೆ. ಆ.೨೨ರ ತನಕ ೭೫೦೦ ಅರ್ಜಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಮುಂದಿನ ವಾರದೊಳಗಾಗಿ ಎಲ್ಲಾ ರೈತರಿಗು ಬಿಲ್ಲುಗಳನ್ನು ಪಾವತಿಸಲಾಗುವುದು.
-ರವಿಕುಮಾರ್, ಕಾರ್ಯದರ್ಶಿ, ಎಪಿಎಂಸಿ ಶ್ರೀನಿವಾಸಪುರ.
ಚಿತ್ರ ೨೪ ಕೆ.ಎಲ್.ಆರ್. ೦೨ : ಚಿನ್ನಪ್ಪರೆಡ್ಡಿ, ಮಾವು ಬೆಳೆಗಾರರ ಅಧ್ಯಕ್ಷ ರವರ ಭಾವಚಿತ್ರ
ಚಿತ್ರ ೨೪ ಕೆ.ಎಲ್.ಆರ್. ೦೨ : ಮಾವು ಸಂಗ್ರಹ ಚಿತ್ರ