ಅಹಿಂದ ಹೆಸರಿನಲ್ಲಿ ಹಿಂದ ಸಮಾಜಕ್ಕೆ ಅನ್ಯಾಯ

Siddu Vijayendra
Published on

ಚಿತ್ರದುರ್ಗ: ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಹಿಂದ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತವೆಂದು ಬೊಬ್ಬೆ ಹೊಡೆದ ಸಿದ್ದರಾಮಯ್ಯ ಅವರ ಇಡೀ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದಕ್ಕೆ ಅವರ ಕೆಲ ಆಪ್ತರು ಹೊರತಲ್ಲ ಎಂದು ಟೀಕಿಸಿದರು.

ಸಿಎಂ ಕಳೆದ ಎರಡು ವರ್ಷದಲ್ಲಿ ಯಾವ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ. ಅಭಿವೃದ್ಧಿ ಶೂನ್ಯವಾಗಿದ್ದು, ಆಡಳಿತ ಪಕ್ಷದ ಶಾಸಕರೇ ಛೀಮಾರಿ ಹಾಕುತ್ತಿದ್ದಾರೆ. ಸ್ವಪಕ್ಷೀಯರ ವಿಶ್ವಾಸ ಕಳೆದುಕೊಂಡು ಸಿದ್ದರಾಮಯ್ಯ ಕೂಡ ಆತಂಕದಲ್ಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರಮೋದಿ ನಾಯಕತ್ವ ವಿಶ್ವ ಒಪ್ಪಿದೆ. ಅವರ ಕುರಿತು ಮಾತನಾಡುವ ಯೋಗ್ಯತೆ, ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ಅಸಂಬದ್ಧ ಹೇಳಿಕೆ ಬದಲು ಪ್ರಗತಿಯತ್ತ ಗಮನಹರಿಸಲಿ, ಮೊಸಳೆ ಕಣ್ಣೀರು ನಿಲ್ಲಿಸಲಿ. ಉಪ ಚುನಾವಣೆ ಕಾವು ಹೆಚ್ಚುತ್ತಿದೆ. ಮೂರು ಕ್ಷೇತ್ರದಲ್ಲೂ ಎನ್‌ಡಿಎ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಲಿದೆ ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net