ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳು ಸೇರಿದಂತೆ ಎಲ್ಲೆಲ್ಲಿ ಅವಿರೋಧ ಆಯ್ಕೆಯಾಗಿವೆ. ಆ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸುವಂತೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.
ಅವಿರೋಧ ಆಯ್ಕೆ ಮೇಲೆ ಕಣ್ಣು:
ಯಾವುದೇ ಗ್ರಾಮಪಂಚಾಯಿತಿ ಸದಸ್ಯರು ನಿಯಮಗಳಿಗೆ ವಿರುದ್ಧವಾಗಿ ಹರಾಜಿನಲ್ಲಿ ಅವಿರೋಧವಾಗಿ ಆಯ್ಕೆಗೊಂಡಿರುವುದು ಸಾಬೀತಾದಾರೆ ಅಂತಹ ಸದಸ್ಯತ್ವ ಅಸಿಂಧುಗೊಳ್ಳಲಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವ್ಯವಹಾರ, ಅಭಿವೃದ್ಧಿ ಹೆಸರಿನಲ್ಲಿ ಅವಿರೋಧ ಆಯ್ಕೆ, ಸದಸ್ಯತ್ವ ಹರಾಜು ಹಾಕುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇದಕ್ಕೆ ಕಡಿವಾಣ ಹಾಕಲು ಸಜ್ಜಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಸಿ ಅವಿರೋಧ ಆಯ್ಕೆಯಾಗಿದ್ದರೆ, ಅಂತಹ ಸದಸ್ಯತ್ವ ಅಸಿಂಧುಗೊಳಿಸಲು ಆಯೋಗ ಮುಂದಾಗಿದೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹಾಗಾಗಿ ಈ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೊಂಡ ಎಲ್ಲ ಪ್ರಕರಣಗಳು ತನಿಖೆಗೆ ಒಳಪಡುವುದು ನಿಶ್ಚಿತವಾಗಿದೆ.
ಅವಿರೋಧ ಆಯ್ಕೆಗಳ ಹಿಂದೆ ಏನಾದರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೆ? ಸದಸ್ಯತ್ವ ಹರಾಜು ಹಾಕಲಾಗಿದೆಯೆ? ಯಾವುದಾದರೂ ಪ್ರಭಾವ ಬಳಸಲಾಗಿದೆಯೆ? ಗ್ರಾಮಸ್ಥರು ಒಗ್ಗೂಡಿ ಅವಿರೋಧ ಆಯ್ಕೆ ಮಾಡಿದ ಪ್ರಕರಣವಾಗಿದೆಯೆ? ಯಾವ ಕಾರಣಕ್ಕಾಗಿ ಅವಿರೋಧ ಆಯ್ಕೆಯಾಗಿದೆ ಎಂಬುದನ್ನು ಪತ್ತೆ ಮಾಡುವಂತೆಯೂ ಆಯೋಗ ಹೇಳಿದೆ.
ಅವಿರೋಧ ಆಯ್ಕೆಯಾದ ಎಲ್ಲ ಪ್ರಕರಣಗಳನ್ನು ತಲಸ್ಪರ್ಶಿಯಾಗಿ ಅವಲೋಕಿಸಿ, ವರದಿ ಸಲ್ಲಿಸುವಂತೆಯೂ ಆಯೋಗ ನಿರ್ದೇಶನ ನೀಡಿದೆ.
ಅವಿರೋಧ ಆಯ್ಕೆ ಪರಿಶೀಲನೆ:
ನೀತಿ ಸಂಹಿತೆ ಉಲ್ಲಂಘನೆ ಸಾಬೀತಾದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ, ಗ್ರಾಮ ಸ್ವರಾಜ್ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆಯೂ ಆಯೋಗ ಸೂಚಿಸಿದೆ. ಹರಾಜು ಹಾಕುವುದು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.ಅಂತಹ ಪ್ರಕರಣ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಲಾಗಿದೆ.
ಪ್ರಕರಣ ದಾಖಲಿಸಲು ಸೂಚನೆ: