ಅವಧಿ ಮೀರಿದ ಪದಾರ್ಥ ಮಾರಿದರೆ ಕ್ರಮ

21HDK01
Published on

ಎಚ್.ಡಿ.ಕೋಟೆ : ಅವಧಿ ಮೀರಿರುವ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ನೀಡಬಾರದು ಹಾಗೂ ಎಲ್ಲ ಹೋಟೆಲ್ ಮತ್ತು ಬೇಕರಿ ಮಾಲೀಕರು ಕಡ್ಡಾಯವಾಗಿ ಆಹಾರ ಪರವಾನಗಿ ಪಡೆಯಬೇಕು ಎಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ಸೂಚನೆ ನೀಡಿದರು.


ಪಟ್ಟಣದ ವಿವಿಧ ಬೇಕರಿಗಳಲ್ಲಿ ಅವಧಿ ಮೀರಿರುವ ತಂಪು ಪಾನೀಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಅಂಗಡಿಯ ಮಾಲೀಕರು ಗ್ರಾಹಕರಿಗೆ ಉತ್ತಮವಾದ ತಂಪು ಪಾನೀಯ ಮತ್ತು ಶುದ್ಧವಾದ ಆಹಾರ ಪದಾರ್ಥಗಳನ್ನು ನೀಡಬೇಕು ಹಾಗೂ ಎಲ್ಲ ತಿಂಡಿ ಪದಾರ್ಥಗಳ ಮೇಲೆ ತಯಾರಿಸಿರುವ ದಿನಾಂಕ ಮತ್ತು ಅವಧಿ ಮೀರುವ ದಿನಾಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.


ಕೋಪ್ಟಾ ಅಡಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿ, ಯಾವುದೇ ಕಾರಣಕ್ಕೂ ತಂಬಾಕು ನಿಷೇಧ ಪ್ರದೇಶದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ಸೂಚಿಸಿದರು.


ಆಹಾರ ಸುರಕ್ಷಿತ ಅಧಿಕಾರಿಗಳು ಬೇಕರಿಯಲ್ಲಿನ ತಿಂಡಿ ಮತ್ತು ತಂಪು ಪಾನೀಯಗಳ ತಯಾರಿಸಿರುವ ದಿನಾಂಕ ಮತ್ತು ಅವಧಿ ಮೀರಿದ ವಸ್ತುಗಳನು ಪರಿಶೀಲನೆ ನಡೆಸಿ ಸ್ಥಳದಲ್ಲೆ ನೋಟಿಸ್ ನೀಡಿದರು. ಆರೋಗ್ಯ ಇಲಾಖೆಯ ರವಿರಾಜ್, ಪ್ರತಾಪ್ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net