

ಕೋಲಾರ: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳು ಅರ್ಹರೆಲ್ಲರಿಗೂ ಇ-ಶ್ರಮ್ ಕಾರ್ಡ್ ವಾಡಿಸಲು ಫೆಬ್ರವರಿ ಪೂರ್ತಿ ಅಭಿಯಾನ ಆಯೋಜಿಸಬೇಕು ಎಂದು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಪೌರಾಯುಕ್ತರು, ಪುರಸಭೆ, ತಾಪಂ ಇಒಗಳು, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಅಧಿಕಾರಿಗಳ ಸಭೆಯಲ್ಲಿ ವಾತನಾಡಿ, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 2 ಸಾವಿರ, ನಗರ, ಪಟ್ಟಣ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ 250 ಜನರಿಗೆ ಇ-ಶ್ರಮ್ ಕಾರ್ಡ್ ನೋಂದಣಿ ವಾಡಿಸಬೇಕು ಎಂದು ತಾಕೀತು ವಾಡಿದರು.
ಅಸಂಟಿತ ಕಾರ್ಮಿಕರಿಗೆ ಯೋಜನೆಗಳ ಲಾಭ ಸಿಗುತ್ತಿಲ್ಲ. ಅಧಿಕಾರಿಗಳು ರೈತ ಕೂಲಿ ಕಾರ್ಮಿಕರು, ಕಾರ್ಖಾನೆಗಳಲ್ಲಿ ಯಾವುದೇ ಸೌಲತ್ತುಗಳಿಲ್ಲದೆ ಕೆಲಸ ವಾಡುತ್ತಿರುವ ದಿನಗೂಲಿಗಳು, ಗುತ್ತಿಗೆ ಆಧಾರದಲ್ಲಿ ಕೆಲಸ ವಾಡುವವರು, ಟೀ, ಸೊಪ್ಪು, ತರಕಾರಿ ವಾರುವವರು, ಕ್ಷೌರಿಕ ಕೆಲಸ ಸೇರಿ ಯಾವುದೇ ಸಣ್ಣ, ಪುಟ್ಟ ಕೆಲಸ ವಾಡುವವರನ್ನು ಗುರುತಿಸಿ ಇ-ಶ್ರಮ್ ಕಾರ್ಡ್ ನೋಂದಣಿ ವಾಡಿಸಿಕೊಡಬೇಕು. ಕಾರ್ಖಾನೆಗಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ವಾಡುವವರಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಚಿತವಾಗಿ ವಾಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ 83 ಸರ್ವೀಸ್ ಸೆಂಟರ್‌ಗಳನ್ನು ತೆರೆಯಲಾಗುತ್ತಿದ್ದು, ಅಲ್ಲಿ ಇ-ಶ್ರಮ್ ಕಾರ್ಡ್ ಉಚಿತವಾಗಿ ವಾಡಲಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗೆ ವಾಹಿತಿ ನೀಡಲು ಅಧಿಕಾರಿವರ್ಗ ಮುಂದಾಗಬೇಕು. ಫೆಬ್ರವರಿ ಅಂತ್ಯದೊಳಗೆ ಗ್ರಾವಾಂತರದಲ್ಲೇ 3 ಲಕ್ಷ ಕಾರ್ಡ್ ವಾಡಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 45 ಸಾವಿರ ಹಾಲು ಉತ್ಪಾದಕರಿದ್ದಾರೆ. ಅವರೆಲ್ಲರಿಗೆ ತಿಳಿವಳಿಕೆ ನೀಡಿ ಕಾರ್ಡ್ ವಿತರಿಸುವ ಹೊಣೆಯನ್ನು ಕೋಚಿಮುಲ್ ಮತ್ತು ಡೇರಿಗಳ ಸಿಬ್ಬಂದಿ ಹೊರಬೇಕು. ಕಾರ್ಮಿಕ ಇಲಾಖೆ ಸಿಬ್ಬಂದಿ ಆಯಾ ತಾಲೂಕು ವ್ಯಾಪ್ತಿಯ ಎಲ್ಲ ಕಾರ್ಖಾನೆಗಳಿಗೆ ಭೇಟಿ ನೀಡಿ ಅಸಂಟಿತ ಕಾರ್ಮಿಕರ ಸಂಪೂರ್ಣ ವಾಹಿತಿ ಕಲೆಹಾಕಬೇಕು. ಇದು ಅವರಿಗೆ ಕಾರ್ಡ್ ವಾಡಿಸಲು ಸಹಾಯವಾಗುವುದರ ಜತೆಗೆ ಅಲ್ಲಿನ ಸಮಸ್ಯೆಗಳ ವಾಹಿತಿಯೂ ದೊರೆಯುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕಾರ್ಖಾನೆ ವಾಲೀಕರು, ಕಾರ್ಮಿಕರ ನಡುವೆ ರ್ಷಣೆ ಏರ್ಪಡುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಜಿಲ್ಲೆ ಪ್ರಥಮ ಸ್ಥಾನದಲ್ಲಿರಬೇಕು: ಜಿಲ್ಲೆಯ ಜನ, ಅಧಿಕಾರಿ, ಸಿಬ್ಬಂದಿಯ ಸಹಕಾರದಿಂದ ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲೇ 5 ನೇ ಸ್ಥಾನದಲ್ಲಿದ್ದೇವೆ. ಅದೇ ರೀತಿ ಇ-ಶ್ರಮ್ ಕಾರ್ಡ್ ನೋಂದಣಿಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರಬೇಕು. ಇದಕ್ಕೆ ಎಲ್ಲರ ಸಹಕಾರ ಮುಖ್ಯ. ಜಿಲ್ಲೆಯು ಕೈಗಾರಿಕೆ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದ್ದು, ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ 5 ಎಕರೆ ಜಾಗ ಒದಗಿಸಲಾಗಿದೆ. ಇದರ ನಿರ್ವಾಣಕ್ಕೆ 4.80 ಕೋಟಿ ರೂ. ಬಿಡುಗಡೆಯಾಗಿದ್ದು, ಶ್ರೀದಲ್ಲೇ ಕೇಂದ್ರ ಕಾರ್ಮಿಕ ಸಚಿವರನ್ನು ಕರೆಸಿ ಭೂಮಿಪೂಜೆ ನೆರವೇರಿಸಲಾಗುವುದು. ಅಷ್ಟರಲ್ಲಿ ಇ-ಶ್ರಮ್ ಕಾರ್ಡ್‌ಗಳ ನೋಂದಣಿ ಕಾರ್ಯ ಯಶಸ್ವಿಯಾಗಿರಬೇಕು ಎಂದು ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚಿಸಿದರು.