ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ೨೦೨೨-೨೩ನೇ ಸಾಲಿನಲ್ಲಿ ೬೬.೧೭ ಲಕ್ಷ ವಹಿವಾಟು ನಡೆಸುವ ಮೂಲಕ ೫.೨೯ ಲಕ್ಷ ರೂ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಡಾ.ಎಂ.ಮುನಿರಾಜು ತಿಳಿಸಿದರು.
ಸೊಸೈಟಿ ಸಭಾಂಗಣದಲ್ಲಿ ಭಾನುವಾರ ನಡೆದ ೧೧೦ನೇ ಸರ್ವಸದಸ್ಯರ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿ, ೧೧೪ ವರ್ಷಗಳ ಇತಿಹಾಸ ಹೊಂದಿರುವ ಅರ್ಬನ್ ಸೊಸೈಟಿ ಸ್ವಂತ ಕಟ್ಟಡ ಹೊಂದಿದ್ದು, ೨೦೨೨-೨೩ನೇ ಸಾಲಿನಲ್ಲಿ ೨,೮೨೫೦೦ ರೂ ಷೇರುಧನ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಸಹಕಾರ ಸಂಘಗಳ ಸಭೆಗಳನ್ನು ನಡೆಸಲು ಜನರನ್ನು ಕರೆ ತರಬೇಕಾಗಿತ್ತು, ಬದಲಾದ ಸಹಕಾರಿ ನಿಯಮಗಳಿಂದಾಗಿ ಪ್ರತಿಯೊಬ್ಬರು ಭಾಗವಹಿಸುವಂತಾಗಿದೆ. ಸಂಘದ ಸಮಸ್ಯೆಗಳು, ವಹಿವಾಟು ಮಾಹಿತಿ, ಪಾರದರ್ಶನ ಆಡಳಿತಕ್ಕಾಗಿ ಚರ್ಚಿಸಲು ವೇದಿಕೆ ಕಲ್ಪಿಸುವ ಉದ್ದೇದಿಂದಲೇ ಸರ್ವಸದಸ್ಯರ ಸಭೆ ನಡೆಸಲಾಗುತ್ತಿದೆ ಎಂದರು.
ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಸದಸ್ಯರಾದ ಶ್ರೀನಿವಾಸಾಚಾರ್, ವೆಂಕಟಾಚಾರ್, ಶ್ಯಾಮಅಯ್ಯಾಂಗಾರ್, ಕೆ.ರಂಗಯ್ಯ, ಎಂ.ಎಸ್.ಮಹದೇವಶಾಸ್ತಿç, ಕೆ.ಎನ್.ಕೋದಂಡರಾಮಯ್ಯ ಸೇವೆಯನ್ನು ಸ್ಮರಿಸಿದರು.
ಸಾಲ ನೀಡಿಕೆ ಮತ್ತು
ಠೇವಣಿ ವಿವರ
ಸದಸ್ಯರಿಗೆ ನೀಡಿರುವ ಆಧಾರ ಸಾಲ ೭೫ ಲಕ್ಷ, ಸ್ವಂತ ಜವಾಬ್ದಾರಿ ಸಾಲ ೬೦ ಲಕ್ಷ, ಕೈಸಾಲ ೫೧೦೦, ಪಿಗ್ಮಿ ಸಾಲ ೭೫ ಸಾವಿರ, ಡಿಕ್ರಿ ಸಾಲ ೧೨೭೦೦ ರೂ ಸದಸ್ಯರಿಂದ ವಸೂಲಿಯಾಗಬೇಕಾಗಿದೆ ಎಂದರು.
ಬಾಕ್ಸ್
ಆರ್‌ಡಿ ಠೇವಣಿ ೫.೭೨ ಲಕ್ಷ, ಖಾಯಂ ಠೇವಣಿ ೧.೨೩ ಕೋಟಿ, ಉಳಿತಾಯ ಠೇವಣಿ ೫೮ ಲಕ್ಷ, ಪಿಗ್ಮಿ ಠೇವಣಿ೬೯.೭೦ ಲಕ್ಷ, ವೆಂಕಟೇಶ್ವರ ಠೇವಣಿ ೧೦.೪೧ ಲಕ್ಷ ಆಫತ್‌ನಿಧಿ ಠೇವಣಿ ೧.೧೧ ಲಕ್ಷ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಘದ ಸದಸ್ಯರ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ಮಕ್ಕಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎನ್.ವೆಂಕಟೇಶ್, ನಿರ್ದೇಶಕರಾದ ಎನ್.ರಾಜಣ್ಣ, ವಿ.ಕೃಷ್ಣ, ಎಸ್.ರವಿಚಂದ್ರನ್, ಎಸ್.ಎಂ.ನಾಗರಾಜ್,ಎಸ್.ಸುರೇಶ್, ಕೆ.ನಟರಾಜ್, ಎಸ್.ಪುಷ್ಪಲತಾ, ಡಾ.ಕೆ.ಬಬಿತಾ, ಸಿಬ್ಬಂದಿ ಕಾರ್ಯದರ್ಶಿ ಡಿ.ಜೆ.ಸುಬ್ರಮಣಿ, ಹಿರಿಯ ಕಾರ್ಯದರ್ಶಿ ಎಲ್.ಸಿ.ಜಯಪ್ರಕಾಶ್, ಎಸ್.ಸುಜಾತಾ, ಎಂ.ಕನ್ನಪ್ಪ, ಕನಕಪ್ರಸಾದ್ ಮತ್ತಿತರರಿದ್ದರು.
ಚಿತ ೨೪ ಕೆ.ಎಲ್.ಆರ್. ೦೩ : ಕೋಲಾರದ ಅರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಸಾಧಕ ಎಸ್ಸೆಸ್ಸೆಲ್ಸಿ,ಪಿಯುಸಿ ಮಕ್ಕಳನ್ನು ಪುರಸ್ಕರಿಸಲಾಯಿತು.