ಅರೆಕಾಲಿಕ ಉಪನ್ಯಾಸಕರ ಗೌರವ ಧನವನ್ನು 40 ಸಾವಿರ ರೂ.ಗೆ ಹೆಚ್ಚಿಸಿ

Lingasuguru Part time Lecturer
ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರು ಗುರುವಾರ ಮನವಿ ಸಲ್ಲಿಸಿದರು.
Published on

ಲಿಂಗಸುಗೂರು: ರಾಜ್ಯ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬಹು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಒಂದು ಸಾವಿರಕ್ಕೂ ಅಧಿಕ ಅರೆಕಾಲಿಕ ಉಪನ್ಯಾಸಕರ ಗೌರವಧನ ಹೆಚ್ಚಿಸಿ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತ ಅವಿನಾಶ ಶಿಂಧೆಗೆ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದಿಂದ ಗುರುವಾರ ಮನವಿ ಸಲ್ಲಿಸಲಾಯಿತು.

ಪ್ರಸ್ತುತ 12,500 ರೂ. ಗೌರವಧನ ನೀಡುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಮಾಸಿಕ 40 ಸಾವಿರ ರೂ. ಗೌರವಧನ ನೀಡಬೇಕು. ಒಂದು ವರ್ಷದಲ್ಲಿ 7 ತಿಂಗಳು ಮಾತ್ರ ಗೌರವಧನ ನೀಡುತ್ತಿದ್ದು, ಉಳಿದ 5 ತಿಂಗಳು ಜೀವನ ನಡೆಸಲು ತೊಂದರೆ ಎದುರಿಸುವಂತಾಗಿದೆ ಎಂದು ದೂರಿದರು.

ವರ್ಷದ 12 ತಿಂಗಳು ಗೌರವ ಧನ ವಿತರಿಸಬೇಕು. 12 ರಿಂದ 15 ವರ್ಷ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಬಹುತೇಕರಿಗೆ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಲು ವಯಸ್ಸು ಮೀರಿರುವುದರಿಂದ ಸೇವಾ ಭದ್ರತೆ ಒದಗಿಸಬೇಕು. ಈ ಮೊದಲು ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಸೇವೆ ಮುಂದುವರಿಸಬೇಕು. ಪ್ರತಿ ತಿಂಗಳು ಗೌರವಧನ ವಿತರಿಸಬೇಕೆಂದು ಒತ್ತಾಯಿಸಲಾಯಿತು.

ಅರೆಕಾಲಿಕ ಉಪನ್ಯಾಸಕಾರಾದ ಶಿವರಾಜ ಕುಮಾರ, ನಾಗರಾಜ, ಲಾಲ್ ಅಹ್ಮದ್, ದೇವರಾಜ, ಪ್ರಶಾಂತ, ವಿನಾಯಕ, ಅಕ್ಷಯ ಕುಮಾರ, ಮಹಾಂತೇಶ, ಮಂಜುಳಾ, ಕವಿತಾ, ಸಂಜೀವರಡ್ಡಿ, ಅಮರೇಶ, ಶರಣಬಸವರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net