ಅರಸೀಕೆರೆ ದೇವಿಯ ಆನೆ ಅಂಬಾರಿ ಉತ್ಸವ

04arsph1ep
Published on

ಅರಸೀಕೆರೆ : ನಗರದ ಅಧಿದೇವತೆಗಳಾದ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರ ಆನೆ ಅಂಬಾರಿ ಉತ್ಸವ
ಇಲ್ಲಿನ ಪ್ರಮುಖ ಬೀದಿಗಳಲ್ಲಿ ವೈಭವದಿಂದ ನೆರವೇರಿತು. ದೇಗುಲದ ಆವರಣದಲ್ಲಿ ಸರ್ವಾಲಂಕೃತ ಗಜರಾಜನಿಗೆ ಶನಿವಾರ ಪೂಜೆ ಸಲ್ಲಿಸಿ ದೇವಿಯರ ಉತ್ಸವ ಮೂರ್ತಿಯನ್ನು ಅಂಬಾರಿ ಮೇಲೆ ಪ್ರತಿಷ್ಠಾಪಿಸಲಾಯಿತು. ಗರುಡನಗಿರಿ ರಸ್ತೆ ಮಾರ್ಗವಾಗಿ ಹೊರಟ ಮೆರವಣಿಗೆ ಸಾಯಿನಾಥ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಹಾಸನ ರಸ್ತೆ ಹಾಗೂ ಪೇಟೆ ಬೀದಿ ಮಾರ್ಗವಾಗಿ ಸಾಗಿ ಬಂದು ಮಲ್ಲಿಗೆಮ್ಮ ದೇವಿಯ ಸನ್ನಿಧಿಯಲ್ಲಿ ಸಮಾಪನಗೊಂಡಿತು.
ಮೈಸೂರು ದಸರಾ ಮಾದರಿಯಲ್ಲಿ ಜರುಗಿದ ಅದ್ದೂರಿ ಅಂಬಾರಿ ಉತ್ಸವ ಕಣ್ತುಂಬಿಕೊಳ್ಳಲು ರಸ್ತೆಗಳ ಇಕ್ಕೆಲಗಳಲ್ಲಿ ಜನಸ್ತೋಮ ಜಮಾಯಿಸಿದ್ದು ವಿಶೇಷವಾಗಿತ್ತು. ದೇವಾಲಯ ಸಮಿತಿ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ, ಸಂಸ್ಥೆಗಳ ಪ್ರಮುಖರು, ನಾಗರಿಕರು ಉತ್ಸವದಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ಅಮ್ಮನವರ ರಾಜಬೀದಿ ಉತ್ಸವದೊಂದಿಗೆ 5 ದಿನಗಳ ಜಾತ್ರಾ ಮಹೋತ್ಸವಕ್ಕೆ ಮಂಗಳ ಹಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net