ಅರಣ್ಯಕ್ಕೆ ನಾವೂ ಮಾಲೀಕರೆಂಬುದನ್ನು ಮರೆತರೆ ಆಪತ್ತು ಖಚಿತ

ctd 24 rita (2).jpgNN
Published on

ಚಿತ್ರದುರ್ಗ: ಅರಣ್ಯಭೂಮಿ ಸರ್ಕಾರದ ಆಸ್ತಿ ಅಷ್ಟೇ ಅಲ್ಲ,ಅದಕ್ಕೆ ನಾವೂ ಮಾಲೀಕರೆಂಬ ಜಾಗೃತಿ ಹೊಂದಿದಾಗ ಸರ್ಕಾರದ ಅರಣ್ಯ ಖಾಸಗೀಕ ರಣ ನೀತಿ ವಿರುದ್ಧ ಪ್ರಬಲ ಹೋರಾಟ ರೂಪಿಸಲು ಸಾಧ್ಯವೆಂದು ಸಾಮಾಜಿಕ ಕಾರ‌್ಯಕರ್ತ ಕೆ.ಪಿ.ಶ್ರೀಪಾಲ್ ಹೇಳಿದರು.ನಗರದ ಪತ್ರಕ ರ್ತರ ಭವನದಲ್ಲಿ ಮಂಗಳವಾರ,ಅರಣ್ಯಭೂಮಿ ಖಾಸಗೀಕರಣ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾ ಡಿ,ಸರ್ಕಾರದ ಈ ನಿರ್ಧಾರ ಸಕಲ ಜೀವರಾಶಿಗಳ ಮೇಲೂ ದುಷ್ಪರಿಣಾಮ ಬೀರಲಿದ್ದು,ಎಲ್ಲ ಜನಪರ ಸಂಘಟನೆಗಳು,ಹೋರಾಟಗಾ ರ ರು,ರೈತರು ಎಚ್ಚೆತ್ತು ಕೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಕರ್ತ ಶಶಿ ಸಂಪಳ್ಳಿ,ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ,ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು,ರಾಜ್ಯಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ,ಮುಖಂಡರಾದ ಕೆ.ಪಿ.ಭೂತಯ್ಯ, ಹೊರಕೇರಪ್ಪ,ಜಿ.ಸಿ.ಸುರೇಶ್‌ಬಾಬು,ರವಿಕುಮಾರ್ ಮಾತನಾಡಿದರು.
ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಗೆ(ಎಂಪಿಎಂ)ಕೊಟ್ಟಿದ್ದ ಅರಣ್ಯಭೂಮಿ ಗುತ್ತಿಗೆ ಕಳೆದ ಆಗಸ್ಟ್ 12ಕ್ಕೆ ಪೂರ್ಣಗೊಂಡಿದೆ. ಈಗ ಸರ್ಕಾರ ಇಲ್ಲಿ ಕಚ್ಛಾ ವಸ್ತು ಬೆಳೆಯಲು ಖಾಸಗಿಯವರಿಗೆ ಗುತ್ತಿಗೆ ನೀಡಲು ನಡೆಸಿರುವ ಹುನ್ನಾರನ್ನು ತಪ್ಪಿಸಬೇಕೆಂದು ಡಿಸಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಪ್ರಮುಖರು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net