ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಾಳ್ಯ ಗ್ರಾಮ ಮತ್ತು ನಾರವಮಾಕಲಪಲ್ಲಿ ಗ್ರಾಮದ ಬಳಿ ಅರಣ್ಯ ಇಲಾಖೆಯವರು ಒತ್ತುವರಿ ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಮತ್ತು ಬಿಜೆಪಿ ಮುಖಂಡರು ಹಾಗೂ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಜೆಸಿಬಿಗಳನ್ನು ಜಖಂಗೊಳಿಸಿದ ಸಂಬಧ ಸಂಸದ ಮುನಿಸ್ವಾಮಿ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ಸೇರಿದಂತೆ ೨೦ ಜನರ ವಿರುದ್ಧ ಕೇಸು ದಾಖಲಿಸಿದ್ದು, ಈ ಸಂಬAಧ ೧೫ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಎಸ್.ಪಿ.ನಾರಾಯಣ್ ಮಾಧ್ಯಮಗಳೊಡನೆ ಮಾತನಾಡಿ, ಅರಣ್ಯ ಸಿಬ್ಬಂದಿ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ಜೆಸಿಬಿಗಳ ಜಖಂಗೊಳಿಸಿರುವ ಮತ್ತು ಪ್ರಚೋದನಾಕಾರಿಯಾಗಿ ಮಾತನಾಡಿರುವ ಸಂಭAದ ೩೦೭ ಸೇರಿದಂತೆ ವಿವಿಧ ಕಲಂ ರೀತ್ಯಾ ಕೇಸುಗಳನ್ನು ದಾಖಲಿಸಲಾಗಿದೆ. ಈ ಸಂಬಧ ಒಂದು ಟೆಂಪೋವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು.
ಸುಮಾರು ೧೦೦ ಕ್ಕೂ ಹೆಚ್ಚು ಜನ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮತ್ತು ಜೆಸಿಬಿಗಳನ್ನು ಜಖಂಗೊಳಿಸಿರುವ ಸಂಬAಧ ವಿಡಿಯೋಗಳ ಮೂಲಕ ಕೆಲವರನ್ನು ಗುರ್ತಿಸಲಾಗಿದೆ. ಈ ಸಂಬಧ ಸದ್ಯಕ್ಕೆ ೨೦ ಜನರ ವಿರುದ್ಧ ಕೇಸು ದಾಖಲಿಸಲಾಗಿದೆ. ಧ್ವಂಸ ಕೃತ್ಯದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚುವ ಕೆಲಸ ಮುಂದುವರೆಯಲಿದೆ ಎಂದರು.
ಇಲಾಖೆ ಸಿಬ್ಬಂದಿಯ ಮೇಲೆ ಹಾಗೂ ಕಾರ್ಯಾಚರಣೆ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಅರಣ್ಯ ಇಲಾಖೆಯವರು ಕಾರ್ಯಾಚರಣೆ ಸಂದರ್ಭದಲ್ಲಿ ಮಾನವೀಯತೆಯಿಂದ ಮನವಿ ಮಾಡಬೇಕು. ಅಥವಾ ಪೋಲಿಸ್ ಇಲಾಖೆಯೊಂದಿಗೆ ಚರ್ಚಿಸಬೇಕು. ಏಕಾಏಕಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮೂರು ಹಂತಗಳಲ್ಲಿ ಕೇಸುಗಳನ್ನು ದಾಖಲಿಕೊಳ್ಳಲಾಗಿದೆ ಎಂದರು.
ಚಿತ್ರ ೧೦. ಕೆ.ಎಲ್.ಆರ್ ೦೫. : ಎಸ್.ಪಿ.ನಾರಾಯಣ್ ರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದು.
ಚಿತ್ರ ೧೦. ಕೆ.ಎಲ್.ಆರ್ ೦೫ಎ : ಶ್ರೀನಿವಾಸಪುರ ಠಾಣೆ ಮುಂಭಾಗ ಜಖಂಗೊAಡಿರುವ ಜೆಸಿಬಿಗಳನ್ನು ನಿಲ್ಲಿಸಿರುವುದು.