ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ

Forest Department launches sapling planting campaign
ಸಾಮಾಜಿಕ ಅರಣ್ಯ ಇಲಾಖೆಯಿಂದ ಹೊರ್ತಿ&ಧೂಳಖೇಡ ರಸ್ತೆ ಬದಿಯಲ್ಲಿ ಚಡಚಣ ತಾ.ಪಂ.ಇಒ ಸಂಜಯ ಖಡಗೇಕರ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸಿ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
Published on

ಇಂಡಿ: ಸಾಮಾಜಿಕ ಅರಣ್ಯ ಇಲಾಖೆಯಿಂದ ಮುಂಗಾರು ಹಂಗಾಮಿನ ಸಸಿ ನೆಡುವ ಕಾರ್ಯಕ್ಕೆ ಹೊರ್ತಿ&ಧೂಳಖೇಡ ರಸ್ತೆಯ ಬದಿಯಲ್ಲಿ ಚಡಚಣ ತಾ.ಪಂ. ಇಒ ಸಂಜಯ ಖಡಗೇಕರ ಅಶ್ವತ್ಥ ವೃಕ್ಷಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನಿಡಿದರು.

ನಂತರ ಮಾತನಾಡಿದ ಅವರು, ನೆಲಕ್ಕೆ ಬೀಳುವ ಪ್ರತಿ ಹನಿ ನೀರಯನ್ನೂ ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಮುಂಚಿತವಾಗಿ ಈ ವರ್ಷ ಸಸಿ ನೆಡುವುದನ್ನು ನೀರುಣಿಸುವ ಮುಖಾಂತರ ಪ್ರಾರಂಭಿಸಲಾಗಿದೆ. ಮುಂಚಿತವಾಗಿ ನೆಟ್ಟ ಸಸಿಗಳು ಅಪರೂಪಕ್ಕೊಮ್ಮೆ ಬೀಳುವ ಪ್ರತಿ ಹನಿಯನ್ನೂ ಕುಡಿದು, ಆರೋಗ್ಯಯುತವಾಗಿ, ಶಕ್ತಿಯುತವಾಗಿ ಬೆಳೆದು ಬಹು ಬೇಗನೇ ಮರಗಳಾಗುತ್ತವೆ ಎಂದರು.

ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ, ಗಸ್ತು ವನಪಾಲಕ ಡಿ.ಎ. ಮುಜಗೊಂಡ, ನಾಗೇಶ ಬಿರಾದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net