ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

29tnpnewsfile01
Published on

ತಿ.ನರಸೀಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆತಂಕ ಮೂಡಿಸಿರುವ ಚಿರತೆ ಹಿಡಿಯಲು ವಿಫಲವಾಗಿರುವ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಬೇಜವಾ ಬ್ದಾರಿಯನ್ನು ಖಂಡಿಸಿ ರೈತಸಂಘ, ದಲಿತ ಸಂಘರ್ಷ ಸಮಿತಿಯ ಸದಸ್ಯರು ಪಟ್ಟಣದ ವಲಯ ಅರಣ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಿನ ವಿವಿಧ ಮಠಗಳ ಮಠಾಧೀಶರ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಲಾಯಿತು.


ಮದ್ಗಾರ ಲಿಂಗಯ್ಯನ ಹುಂಡಿ ಮಠದ ಶ್ರೀ ಗೌರಿಶಂಕರ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಯನ್ನು ಚಿರತೆ ಬಲಿಪಡೆದು ತಿಂಗಳು ಕಳೆಯುತ್ತ ಬಂದಿದ್ದರೂ ಚಿರತೆಯನ್ನು ಸೆರೆ ಹಿಡಿಯದಿರುವುದು ಅರಣ್ಯ ಇಲಾಖೆಯ ವೈಫಲ್ಯವನ್ನು ಎತ್ತಿತೋರಿಸುತ್ತದೆ. ಹಾಗಾಗಿ ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾ ಚರಣೆ ನಡೆಸಿ ಚಿರತೆಯನ್ನು ಹಿಡಿಯಬೇಕು. ಇಲ್ಲವಾದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಇಲಾಖೆಯನ್ನೇ ನೇರ ಹೊಣೆ ಮಾಡಲಾಗುವುದು ಎಂದರು.

ಘಟನೆ ನಡೆದು ತಿಂಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಸಿಲ್ಲ. ಇದು ಅವರು ಜನರ ಮೇಲಿಟ್ಟಿರುವ ಅಸಡ್ಡೆ ಪ್ರವೃತ್ತಿಯನ್ನು ತೋರಿಸುತ್ತದೆ. ಐಷಾರಾಮಿ ಕಾರು, ಬಂಗಲೆ ಮತ್ತು ಗೂಟದ ಕಾರಿನಲ್ಲಿ ಓಡಾಡುವುದನ್ನು ಬಿಟ್ಟು ಬಡವರ ಕಷ್ಟ ಗಳ ಕಡೆ ಗಮನಹರಿಸ ಬೇಕು. ಜನಸೇವೆ ಮಾಡುವ ಇಚ್ಛಾಶಕ್ತಿ ಇಲ್ಲದಿದ್ದಲ್ಲಿ ರಾಜ ಕೀಯ ಕ್ಷೇತ್ರವನ್ನು ಬಿಟ್ಟು ಅನ್ಯ ಕ್ಷೇತ್ರ ವನ್ನು ಆಯ್ಕೆ ಮಾಡಿ ಕೊಳ್ಳುವಂತೆ ಕಿಡಿಕಾರಿ ದರು. ಶಾಸಕ ಎಂ. ಅಶ್ವಿನ್‌ಕುಮಾರ್ ಮಾತನಾಡಿ, ಘಟನೆ ನಡೆದ ದಿನದಂದು ಅರಣ್ಯ ಇಲಾಖೆಯವರು ವಾರದೊಳಗೆ ಚಿರತೆಯನ್ನು ಸೆರೆ ಹಿಡಿಯಲು ಕಾಲಾವಕಾಶ ತೆಗೆದು ಕೊಂಡಿದ್ದರು. ಆದರೆ ತಿಂಗಳು ಕಳೆದರೂ ಚಿರತೆ ಹಿಡಿದಿಲ್ಲ ಎಂದು ಅಧಿಕಾರಿಗಳ ಮೇಲೆ ಕೆಂಡಾಮಂಡಲವಾದರು.

ಜಿಲ್ಲಾ ಅರಣ್ಯ ಅಧಿಕಾರಿ ಗಳ ಜತೆ ತುರ್ತು ಸಭೆ ನಡೆಸಿ ಕಾರ್ಯಾಚರಣೆಯನ್ನು ಕೈಗೊಂಡು ವಾರದೊಳಗೆ ಚಿರತೆಯನ್ನು ಸೆರೆ ಹಿಡಿಯಲು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಮಟ್ಟದಲ್ಲಿರುವ ಸಮಸ್ಯೆಯನ್ನು ಜಿಲ್ಲಾ, ರಾಜ್ಯಮಟ್ಟಕ್ಕೆ ತೆಗೆದುಕೊಂಡು ಹೋಗಬೇಡಿ. ಮತ್ತೆ ಜನರಿಂದ ಎಚ್ಚರಿಕೆ ಪಡೆಯಬೇಕಿಲ್ಲ. ಅಧಿಕಾರಿಗಳು ನಿಮ್ಮ ಕೆಲಸ ಸರಿಯಾಗಿ ಮಾಡಿದರೆ ಜನರು ನಿಮ್ಮನ್ನು ದೂಷಿಸುವುದಿಲ್ಲ ಎಂದರು. ಮೃತನ ಮರಣೋತ್ತರ ವರದಿ ಬಂದ ತಕ್ಷಣ ಉಳಿದ ಪರಿಹಾರ ಹಣವನ್ನು ಸಂತ್ರಸ್ತ ಕುಟುಂಬಕ್ಕೆ ಒದಗಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಹೆಚ್ಚು ಪರಿಹಾರ ಕೊಡಿಸಿಕೊಡುವ ಬಗ್ಗೆ ಭರವಸೆ ನೀಡಿದರು.


ಪ್ರತಿಭಟನೆಯಲ್ಲಿ ಹಲವಾರ ಮಠದ ಷಡಕ್ಷರ ಸ್ವಾಮೀಜಿ, ಕಳ್ಳೀಪುರ ಮಠದ ಚಿದಾನಂದ ಶಿವಾಚಾರ್ಯ ಸ್ವಾಮೀಜಿ, ಸೇತುವೆ ಮಠದ ಸಹಜಾನಂದ ಸ್ವಾಮೀಜಿ, ನೆರಗ್ಯಾತನಹಳ್ಳಿ ಮಠದ ಶಿವಕುಮಾರ ಸ್ವಾಮೀಜಿ, ಅಂಗರಪುರ ಮಠದ ಬಸವಲಿಂಗ ಸ್ವಾಮೀಜಿ, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್, ಸೋಸಲೆ ರಾಜಶೇಖರ್, ರಾಜ್ಯರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಪ್ರಧಾನ ಕಾರ್ಯದರ್ಶಿ ಇಮ್ಮಾವು ರವಿ, ಗೌರವಾಧ್ಯಕ್ಷ ಕೆ.ಜಿ. ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್, ಜಿಲ್ಲಾ ಸಂಚಾಲಕ ಕಳ್ಳೀಪುರ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಪ್ರದೀಪ್, ದಸಂಸ ಕನ್ನಾಯಕನಹಳ್ಳಿ ಮರಿಸ್ವಾಮಿ, ರಾಜು, ತಾಲೂಕು ಸಂಚಾಲಕ ರಾಜು, ಮನೋಜ್, ಮಹೇಶ್, ರಾಜಪ್ಪ, ಕುಮಾರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net