

ಅರಕಲಗೂಡು: ತಾಲೂಕಿನ ದೇವಾಲಯಗಳ ಊರು ರಾಮನಾಥಪುರದಲ್ಲಿ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ನೇತೃತ್ವದಲ್ಲಿ ಬುಧವಾರ ಕರೊನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುಖಾಸುಮ್ಮನೆ ಹಬ್ಬಿರುವ ವದಂತಿಗಳಿಗೆ ಭಯಪಡದೆ ಕರೊನಾ ಕಾಯಿಲೆ ಕುರಿತು ಜನತೆ ಗಾಬರಿಗೆ ಒಳಗಾಗಬೇಕಿಲ್ಲ, ಜನಸಂದಣಿ ನಡುವೆ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರುವ ಮೂಲಕ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.
ಮುಖ್ಯವಾಗಿ ಎಲ್ಲೆಡೆ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಂಡೊಡನೆ ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು, ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದು ತಹಸೀಲ್ದಾರ್ ರೇಣುಕುಮಾರ್ ಸಲಹೆ ನೀಡಿದರು.
ತಾಪಂ ಇಒ ಎನ್. ರವಿಕುಮಾರ್, ರಾಜಸ್ವ ನಿರೀಕ್ಷಕಸಿ. ಸ್ವಾಮಿ, ಉಪ ತಹಸೀಲ್ದಾರ್ ಚಂದ್ರು, ಗ್ರಾಪಂ ಅಧ್ಯಕ್ಷ ಕಾಳೇಗೌಡ, ಪಿಡಿಒ ವಿಜಯಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಧರ್ಮೇಶ್, ಸಂಜೀವ್ ಚೌವ್ಹಾಣ್, ಮಧುಕುಮಾರ್, ಯಾದವ್, ಪ್ರದೀಪ್ ಕಾಂಬಳೆ, ಕಾರ್ತಿಕ್, ಡಾ. ಸೌಮ್ಯ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರು ಹಾಜರಿದ್ದರು.