ಅರಕಲಗೂಡಿನಲ್ಲಿ ಆಶ್ರಯ ಪಡೆದಿದ್ದ ಬೀದರ್ ನ ನಿರಾಶ್ರಿತರನ್ನು ಬಸ್ ಮೂಲಕ ಕಳುಹಿಸಿಕೊಟ್ಟ ತಹಸೀಲ್ದಾರ್

IMG-20200425-WA0024.jpg
Published on

ಅರಕಲಗೂಡು: ಮಹಾಮಾರಿ ಕರೊನಾ ಲಾಕ್ ಡೌನ್ ಸಂಕಷ್ಟದಿಂದಾಗಿ ಪಟ್ಟಣದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬೀದರ್ ಜಿಲ್ಲೆಯ ೧೦ ಜನ ನಿರಾಶ್ರಿತರನ್ನು ತಾಲೂಕು‌ ಆಡಳಿತದ ವತಿಯಿಂದ ಶನಿವಾರ ಸಂಜೆ ಬೀಳ್ಕೊಟ್ಟು ಕಳುಹಿಸಲಾಯಿತು.

ನಿರಾಶ್ರಿತರನ್ನು ಕೆಎಸ್ ಆರ್ ಟಿಸಿ ಬಸ್ ಗೆ ಹತ್ತಿಸಿ ಬೀಳ್ಕೊಟ್ಟು ಮಾತನಾಡಿದ ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಹಳ್ಳಿ ಹಳ್ಳಿಗಳಿಗೆ ತೆರಳಿ ಡ್ರಂಗಳು ಮತ್ತಿತರ ಪಾತ್ರೆ ವಸ್ತುಗಳನ್ನು ಮಾರಾಟ ಮಾಡಿ ತಾಲೂಲಿನ ಅಲ್ಲಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮಂಗಲಗಿ ಗ್ರಾಮದ ಹತ್ತು ಜನರು ಕರನಾ ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿ ರಾಮನಾಥಪುರದಲ್ಲಿ ನೆಲೆಸಿದ್ದರು.

ಹೀಗಾಗಿ ಎಲ್ಲ ನಿರಾಶ್ರಿತರ ಆರೋಗ್ಯ ತಪಾಸಣೆ ನಡೆಸಿ ಅರಕಲಗೂಡು ನಿರಾಶ್ರಿತರ ಕೇಂದ್ರದಲ್ಲಿ‌ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂರು ಹೊತ್ತು ಊಟ, ತಿಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಿರಾಶ್ರಿತರಿಗೆ ಯಾವುದೇ ಕೊರತೆ ಎದುರಾಗದಂತೆ ನಿಗಾ ವಹಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಸೌಲಭ್ಯ ಒದಗಿಸಲಾಗಿತ್ತು.

ಇಂದು‌ ಸರ್ಕಾರದ ಆದೇಶದ ಮೇರೆಗೆ ನಿರಾಶ್ರಿತರಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿ ಸ್ವಗ್ರಾಮಕ್ಕೆ ಕಳುಹಿಸಲಾಗುತ್ತಿದೆ. ನಿರಾಶ್ರಿತರು ಬಸ್ ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಂಡಿಕೊಳ್ಳುವ ಉದ್ದೇಶದಿಂದ ೧೦ ಜನರಿಗೆ ಒಂದು‌ ಸಾರಿಗೆ ಬಸ್ ಉಚಿತವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸರ್ಕಾರಿ‌ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.‌ ದೀಪಕ್, ಸಮಾಜ ಕಲ್ಯಾಣಾಧಿಕಾರಿ ಭಾಗೀರಥಿ, ಸಿಪಿಐ ದೀಪಕ್, ಸಬ್ ಇನ್ಸ್ ಪೆಕ್ಟರ್ ವಿಜಯಕೃಷ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net