ಅಭಿವೃದ್ಧಿ ಕೆಲಸಗಳು ಮುಖ್ಯ

1673673318287
Published on

ಕಂಪಲಾಪುರ: ನಾವು ಎಷ್ಟು ದಿನ ಅಧಿಕಾರದಲ್ಲಿರುತ್ತೇವೆ ಎಂಬುದು ಮುಖ್ಯವಲ್ಲ. ಅಧಿಕಾರದಲ್ಲಿದ್ದಾಗ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ ಎಂದು ಶಾಸಕ ಕೆ.ಮಹದೇವ್ ಹೇಳಿದರು.


ಸಮೀಪದ ಬಸಲಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ಕರೊನಾ ಬಂದು ಇಡೀ ರಾಜ್ಯವೇ ಸ್ತಬ್ಧವಾಯಿತು. ನಂತರ ಒಂದು ವರ್ಷ ಅತಿವೃಷ್ಟಿ ರಾಜ್ಯದಲ್ಲಿ ಅಪಾರ ಹಾನಿಯಾಯಿತು. ಈ ಎರಡು ಕಾರಣಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗಲಿಲ್ಲ. ಉಳಿದ ಎರಡು ವರ್ಷಗಳ ಅವಧಿಯಲ್ಲಿ ಮೂವತ್ತು ವರ್ಷಗಳಿಂದ ಆಗದ ಕೆಲಸಗಳನ್ನು ಒಂದು ಮುಕ್ಕಾಲು ವರ್ಷದಲ್ಲಿ ಮಾಡಿದ್ದೇನೆ ಎಂದರು.


ಕುಡಿಯುವ ನೀರಿನಲ್ಲಿ ಅಶುದ್ಧವಾಗಿರುವ ಹಿನ್ನೆಲೆಯಲ್ಲಿ ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಇದನ್ನು ಮನಗಂಡು ತಾಲೂಕಿನ 303 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಕ್ರಿಯಾಯೋಜನೆ ಸಿದ್ಧಗೊಂಡಿದ್ದು ಕೆಲ ದಿನಗಳಲ್ಲಿ ಸಾಕಾರಗೊಳ್ಳಲಿದೆ. ರಾಜ್ಯದ ಮುಖ್ಯ ಮಂತ್ರಿಗಳನ್ನು ಆಹ್ವಾನಿಸಿ ಚಾಲನೆ ನೀಡಲಾಗುವುದು ಎಂದರು.


ಹಿರಿಯ ವಕೀಲ ಗೋವಿಂದೇಗೌಡ ಮಾತನಾಡಿ, ಸರ್ಕಾರದ ಯಾವುದೇ ಕೆಲಸಗಳು ಗ್ರಾಮಕ್ಕೆ ಆಗಬೇಕೆಂದರೆ ಒಮ್ಮತ ಮುಖ್ಯ. ಹಾಗಾದಾಗ ಾರ ಬಳಿ ಬೇಕಾದರೂ ಅನುದಾನ ಕೇಳಿ ಕೆಲಸ ಮಾಡಿಸಿಕೊಳ್ಳಬಹುದು ಎಂದರು.


ಶಾಸಕರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಕೂಗಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಜೆ.ಸತೀಶ್, ದೊಡ್ಡಬೇಲಾಳು ಗ್ರಾ.ಪಂ. ಅಧ್ಯಕ್ಷೆ ಸೈಯದ್ ಜವೇರಿಯ, ಉಪಾಧ್ಯಕ್ಷ ರಾಮನಾಯ್ಕ, ಸದಸ್ಯರಾದ ಅಂಬಿಕಾ ಮಂಜು, ಶಿಲ್ಪ್ಪಾ ನಾಗೇಗೌಡ, ಸ್ವಾಮಿ, ಸಹಕಾರ ಸಂಘದ ಅಧ್ಯಕ್ಷ ಕೆ.ಶಿವಣ್ಣ, ನಿರ್ದೇಶಕರಾದ ಎಂ.ಟಿ.ಕುಮಾರ್, ಬಸವರಾಜೇಅರಸ್, ಕಂಪಲಾಪುರ ಕೊಪ್ಪಲು ಡೇರಿ ಅಧ್ಯಕ್ಷ ಕೆ.ಎಂ.ಲಕ್ಷ್ಮಣ್, ಮುಖಂಡರಾದ ಶ್ರೀನಿವಾಸಗೌಡ , ರಾಮೇಗೌಡ, ಪುಟ್ಟೇಗೌಡ, ಅಂದಾನಿಗೌಡ, ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net