

ಐಗಳಿ: ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅನುದಾನದಡಿ ನಿರ್ಮಿಸಲಾದ ಮೂರು ಮಾರಾಟ ಮಳಿಗೆಗಳ ಉದ್ಘಾಟನೆ ಹಾಗೂ ಆರು ನೂತನ ಮಾರಾಟ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಪಂ ಪ್ರಮುಖ ಪಾತ್ರವಿದ್ದು, ಪರಸ್ಪರ ಸಹಕಾರ ಅವಶ್ಯ. ಸಣ್ಣ ಕೆರೆ ಹೂಳೆತ್ತುವುದು, ಮುಖ್ಯ ಪೇಟೆಯ ಡಾಂಬರೀಕರಣ, ಜಲಾಲಸಾಹೇಬ ದೇವರ ಗುಡಿ ರಸ್ತೆ ಕಾಮಗಾರಿ, ಅಡಹಳ್ಳಿ, ಕೊಹಳ್ಳಿ ಮಾರ್ಗವಾಗಿ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ವಿ.ಎ.ವಾಲಿ, ಶಿವಾನಂದ ಕಲ್ಲಾಪೂರ, ರಾಜೇಂದ್ರ ಪಾಠಕ್, ಮುಖಂಡ ಸಿ.ಎಸ್.ನೇಮಗೌಡ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಬಿ.ಎಸ್.ಬಿರಾದಾರ, ಎಸ್.ಎಸ್.ಮಾಕಾಣಿ, ಎ.ಎಸ್.ಪಾಟೀಲ, ನೂರಅಹ್ಮದ್ ಡೊಂಗರಗಾಂವ, ಬಂದೇನವಾಜ್ ಮುಜಾವರ್, ಬಾಳ ಮುಜಾವರ್, ಬಸವರಾಜ ಬಿರಾದಾರ, ಬೈರು ಬಿಜ್ಜರಗಿ, ಸುರೇಶ ಬಿಜ್ಜರಗಿ, ರವೀಂದ್ರ ಹಾಲಳ್ಳಿ, ರಾಜಕುಮಾರ ದಳವಾಯಿ ಇತರರಿದ್ದರು.