ಅಭಿಲೇಖಾಲಯ ಬ್ರ್ಯಾಂಡ್ ಆಗಿಸುವ ಗುರಿ

klr record room
ಕೆಜಿಎಫ್​ ತಾಲೂಕು ಕಚೇರಿಗೆ ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಭೇಟಿ ನೀಡಿ ಅಭಿಲೇಖಾಲಯದಲ್ಲಿನ ಕಂದಾಯ ದಾಖಲೆಗಳ ಗಣಕೀಕರಣ ಕುರಿತು ಪರಿಶೀಲಿಸಿದರು.
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಜಿಲ್ಲೆಯ 2 ಕಂದಾಯ ಅಭಿಲೇಖಾಲಯಗಳನ್ನು ಮಾದರಿಯನ್ನಾಗಿಸಲು ಕಂದಾಯ ಇಲಾಖೆ ಕ್ರಮಹಿಸಿದ್ದು, ಜಿಲ್ಲಾಡಳಿತ ಬ್ರ್ಯಾಂಡ್ ಮಾಡುವ ಗುರಿಯೊಂದಿಗೆ ಮುಂದಡಿ ಇಟ್ಟಿದೆ.

ಜಿಲ್ಲೆಯ ಕೆಜಿಎ್​ ಮತ್ತು ಕೋಲಾರ ತಾಲೂಕು ಕಚೇರಿಯಲ್ಲಿನ ಅಭಿಲೇಖಾಲಯ (ರೆಕಾರ್ಡ್ಸ್​ ರೂಂ)ಗಳನ್ನು ಮಾದರಿಯನ್ನಾಗಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಕೊಠಡಿಯಲ್ಲಿ ಭದ್ರ ಪಡಿಸಿರುವ ದಾಖಲೆಗಳನ್ನು ಸ್ಕಾ$ನ್​ ಮಾಡಿ ದಾಖಲು ಮಾಡುವ ಕೆಲಸ ಭರದಿಂದ ಸಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ.

ತಾಲೂಕು ಕಚೇರಿಗಳಲ್ಲಿ ಲಭ್ಯವಿರುವ ಭೌತಿಕ ಮೂಲ ದಾಖಲೆಗಳ ರಕ್ಷಣೆಗೆ ಕ್ರಮಕೈಗೊಂಡಿರುವ ಕಂದಾಯ ಇಲಾಖೆಯು, ತಾಲೂಕು ಕಚೇರಿಯಲ್ಲಿನ ದಾಖಲೆಗಳ ಕೊಠಡಿಗೆ ಮೊಬೈಲ್​ ಕಾಂಪ್ಯಾಕ್ಟರ್​, ಸಿಸಿ ಕ್ಯಾಮರಾ ಒದಗಿಸಿದೆ. ಅಂತೆಯೇ, ದಾಖಲೆಗಳು ದುರ್ಬಳಕೆಯಾಗುವುದನ್ನು ತಡೆಗಟ್ಟಲು ಸರ್ಕಾರ ಭೂ ಸುರಕ್ಷಾ ಯೋಜನೆ ರೂಪಿಸಿದೆ. ಅದರಡಿ ಕೋಲಾರ ಮತ್ತು ಕೆಜಿಎ್​ ತಾಲೂಕನ್ನು ಪೈಲೆಟ್​ ಪ್ರಾಜೆಕ್ಟ್​ ಆಗಿ ತೆಗೆದುಕೊಳ್ಳಲಾಗಿದೆ. ಈ ಎರಡೂ ತಾಲೂಕುಗಳಲ್ಲಿ ಶೇ.100 ಸಾಧನೆ ಆದ ನಂತರ ಇತರ ತಾಲೂಕುಗಳಿಗೂ ವಿಸ್ತರಿಸಲು ಜಿಲ್ಲಾಡಳಿತ ಕ್ರಮವಹಿಸಲಿದೆ.

ಈ ಕ್ರಮದಿಂದ ತಾಲೂಕುಕಚೇರಿಯ ದಾಖಲೆಗಳನ್ನು ತಿದ್ದುವುದು, ವಾರಸುದಾರರಿಲ್ಲದ ಜಮೀನುಗಳನ್ನು ಬೇರೆಯವರ ಹೆಸರಿಗೆ ವರ್ಗಾವಣೆ, ಕಣ್ಮರೆ ಮಾಡುವುದು ಮತ್ತುಕಳವು ಅಥವಾ ಬೆಂಕಿಯಿಡುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ.

ತ್ವರಿತಗತಿಯಲ್ಲಿ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಸೇವೆ ಒದಗಿಸಲು, ದಾಖಲೆ ರಸಿಡಲು ಕಂದಾಯ ಇಲಾಖೆಯು ಭೂ ಸುರಾ, ಭೂ ದಾಖಲೆಗಳನ್ನು ಈ&ಖಜಾನೆ ವ್ಯವಸ್ಥೆ ಮೂಲಕ ತಾಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣ ವ್ಯವಸ್ಥೆ ಜಾರಿ ಮಾಡಿದೆ.

ಹಳೆಯ ಭೂ ದಾಖಲೆಗಳನ್ನು ಶಾಶ್ವತವಾಗಿ ಸುರತವಾಗಿಸುವುದು ಮೂಲ ಉದ್ದೇಶವಾಗಿದ್ದು, ಜತೆಗೆ ರೆಕಾರ್ಡ್ಸ್​ ರೂಂಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆ ಸೇರಿ ಶಾಶ್ವತವಾಗಿ ರಸಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ. ನೇರವಾಗಿ ಡಿಜಿಟಲ್​ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ಕೋಲಾರ, ಕೆಜಿಫ್ ತಾಲೂಕು ಕಚೇರಿಯಲ್ಲಿನ ದಾಖಲೆಗಳ ಡಿಜಟಲೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕೋಲಾರ ತಾಲೂಕು ವ್ಯಾಪ್ತಿಯಲ್ಲಿ 7 ಹೋಬಳಿಗಳು, 364 ಗ್ರಾಮಗಳು, 63 ಗ್ರಾಮ ಲೆಕ್ಕ ವೃತ್ತಗಳಿದ್ದು, ಜಮೀನುಗಳ ಸಂಬಂಧ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಕೆಜಿಎ​ ತಾಲೂಕು ವ್ಯಾಪ್ತಿಯಲ್ಲಿ 3 ಹೋಬಳಿಗಳು, 193 ಗ್ರಾಮಗಳು, 21 ಗ್ರಾಮ ಲೆಕ್ಕ ವೃತ್ತಗಳಿದ್ದು, ವ್ಯಾಪ್ತಿಯ ಜಮೀನುಗಳ ಸಂಬಂಧ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪ್ರಗತಿಯಲ್ಲಿದೆ. ತ್ವರಿತವಾಗಿ ಮುಗಿಸಿ ಮಾದರಿ ಅಭಿಲೇಖಾಲಯ ನಿರ್ಮಾಣ ಮಾಡಿ ಬ್ರ್ಯಾಂಡ್ ಮಾಡುವ ಗುರಿ ಜಿಲ್ಲಾಡಳಿತ ಹೊಂದಿದೆ.

* ಜವಾಬ್ದಾರಿ ಹೊತ್ತವರೇ ಹೊಣೆ

ಈ ಹಿಂದೆ ಜಮೀನುಗಳ ದಾಖಲೆ ಬಟ್ಟೆಗಳಲ್ಲಿ ಮೂಟೆ ಕಟ್ಟಿ ಕಪಾಟುಗಳಲ್ಲಿ ಜೋಡಿಸಲಾಗಿತ್ತು. ಇದರಿಂದ ಕಚೇರಿಯ ಸಿಬ್ಬಂದಿಯೇ ಭೂಗಳ್ಳರೊಂದಿಗೆ ಶಾಮೀಲಾಗಿ ದಾಖಲೆ ತಿದ್ದಿರುವುದು, ದಾಖಲೆ ನಾಪತ್ತೆ ಮಾಡಿರುವುದು ಹೀಗೆ ಸಾಕಷ್ಟು ಪ್ರಕರಣಗಳು ನಡೆದಿವೆ. ಇಂತಹ ಪ್ರಕರಣಗಳಲ್ಲಿ ಯಾರನ್ನೂ ಹೊಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಲಾಕರ್​ಗಳ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಿರುವುದರಿಂದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಾಖಲೆಗಳ ತಿದ್ದುವಿಕೆ, ಕಣ್ಮರೆಯಂತಹ ಪ್ರಕರಣಗಳು ನಡೆದಾಗ ಜವಾಬ್ದಾರಿ ವಹಿಸಿಕೊಂಡಿರುವ ಅಧಿಕಾರಿಯೇ ಹೊಣೆಯಾಗುತ್ತಾರೆ ಎಂದು ಡಿಸಿ ತಿಳಿಸಿದ್ದಾರೆ.

* ರೈತರಿಗೆ ಭೂ ಸುರಕ್ಷಾ ಬಲ

ಜಿಲ್ಲೆಯ ಮಾಲೂರು, ಕೋಲಾರ ತಾಲೂಕಿನ ನರಸಾಪುರ, ವೇಮಗಲ್​ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಮುಂದಿನ ದಿನಗಳಲ್ಲಿ ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು, ಮೇಮಗಲ್​ ಭಾಗದಲ್ಲಿ ಹೆಚ್ಚಿನ ಜಮೀನು ಸ್ವಾಧಿನಪಡಿಸಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ನೀಡಲು ಸರ್ಕಾರ ಮುಂದಾಗಿದೆ. ಕೆಐಡಿಬಿಗೆ ಭೂಮಿ ಬಿಟ್ಟುಕೊಡುವ ರೈತರಿಗೆ ಭೂ ಪರಿಹಾರ ಕಲ್ಪಿಸಲಾಗುತ್ತದೆ. ಆದರೆ, ಸಮರ್ಪಕವಾಗಿ ದಾಖಲೆಗಳು ಇದ್ದು ಕೆಲವರಿಗೆ ಪರಿಹಾರ ಕೈ ತಪ್ಪಿದೆ. ಇದಕ್ಕೆ ಭೂ ದಾಖಲೆಗಳ ಕೊಠಡಿಯಲ್ಲಿ ಆಗಿರುವ ಬದಲಾವಣೆಗಳಿಂದಲೋ, ರೈತರ ಜಮೀನುಗಳನ್ನು ಬೇರೆಯವರಿಗೆ ಪರಭಾರೆ ಮಾಡುವ ಉದ್ದೇಶದಿಂದಲೋ ರೈತರು ಪರಿತಪಿಸುವಂತಾಗಿದೆ. ಇಂತಹುದನ್ನು ತಪ್ಪಿಸಲು ಸರ್ಕಾರ ಜಾರಿಗೆ ತಂದಿರುವ ಭೂ ಸುರಕ್ಷಾ ಯೋಜನೆಯೂ ರೈತರಿಗೆ ಅನುಕೂಲವಾಗಿದೆ.

ಕೋಟ್​...

ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಈಗ ಕೋಲಾರ ಮತ್ತು ಕೆಜಿಎ್​ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ. ಮಾದರಿ ಅಭಿಲೇಖಾಲಯವನ್ನು ಬ್ರಾ$್ಯಂಡ್​ ಆಗಿಸಲು ಕ್ರಮವಹಿಸಲಾಗಿದೆ.

* ಡಾ.ಎಂ.ಆರ್​.ರವಿ, ಜಿಲ್ಲಾಧಿಕಾರಿ, ಕೋಲಾರ

ಕೋಟ್​...

ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಭೂಮಿಯ ಬೆಲೆ ಗಗನಕ್ಕೇರಿದೆ. ಇದರ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಸಿಬ್ಬಂದಿ, ಅಧಿಕಾರಿಗಳು ಖಾಸಗಿಯವರೊಂದಿಗೆ ಶಾಮೀಲಾಗಿ ದಾಖಲೆ ನಾಪತ್ತೆ ಮಾಡುವ ಆರೋಪವಿತ್ತು. ಇದನ್ನು ತಪ್ಪಿಸಲು ಸರ್ಕಾರ ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿರುವುದು ಶ್ಲಾನೀಯ.

* ಕೋಟಿಗಾನಹಳ್ಳಿ ಗಣೇಗೌಡ, ನಮ್ಮ ರೈತ ಸಂದ ಅಧ್ಯಕ್ಷ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net