

ಪರಿಸರ ಸೇವಾ ಟ್ರಸ್ಟ್ ವತಿಯಿಂದ ಕಲಾಮಂದಿರದಲ್ಲಿ ಸೋಮವಾರ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ‘ಅಪ್ಪು-50 ನೀವಿರ್ಬೇಕಿತ್ತು’ ಕಾರ್ಯಕ್ರಮ ನೆರವೇರಿತು.
ಅನ್ನ ಚಿತ್ರದ ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ ನೇತೃತ್ವದಲ್ಲಿ ಸರಿಗಪ ಖ್ಯಾತಿಯ ಚನ್ನಪ್ಪ, ನಿತಿನ್ ರಾಜರಾಮ್ ಶಾಸ್ತ್ರಿ, ಶ್ರುತಿ ತುಮಕೂರು, ದಿವ್ಯಾ ಸಚ್ಚಿದಾನಂದ ಅನಿತಾ, ಸಿದ್ದೇಶ್ ಬದನವಾಳು ಅವರು ಪುನೀತ್ ನಟನೆಯ ಚಿತ್ರಗೀತೆಗಳನ್ನು ಶುಶ್ರಾವ್ಯವಾಗಿ ಹಾಡಿ ರಂಜಿಸಿದರು.
‘ಗೊಂಬೆ ಹೇಳುತತೈತೆ, ಮತ್ತೆ ಹೇಳುತೈತೆ ನೀನೆ ರಾಜ ಕುಮಾರ’ ಹಾಡಿಗೆ ನೆರೆದಿದ್ದವರು ಬಾವುಕರಾದರು. ಶ್ರುತಿ ಮತ್ತು ತಂಡ ನೃತ್ಯ ಪ್ರದರ್ಶಿಸಿದರು. ಡ್ಯಾನ್ಸ್ ಡ್ಯಾನ್ಸ್ ಅಪ್ಪು ಎಂಬ ಹಾಡಿಗೆ ಕುಣಿದು ಕುಪ್ಪಳಿಸಿದರು.
ಅಜಯ್, ಶರತ್ ಕೀಬೋರ್ಡ್‌ನಲ್ಲಿ ವಿನಯ್ ರಂಗದೊಳ್ ರಿದಂ ಪ್ಯಾಡ್, ತಬಲಾ ಆತ್ಮರಾಮ್, ಡೋಲಕ್ ಶಿವ ಮಲ್ಲು ಸಾಥ್ ನೀಡಿದರು. ಮೌರ್ಯ ಸಿನಿಮಾದ ಉಸಿರಾಗುವೆ ಹಾಡನ್ನು ಕೀ ಬೋರ್ಡ್‌ನಲ್ಲಿ ನುಡಿಸಿ ನೆರೆದಿದ್ದವರನ್ನು ತನ್ಮಯರಾಗಿಸಿದರು.
ರಾಜ್ಯ ಪ್ರಶಸ್ತಿ ವಿಜೇತ ಎನ್.ಪರಮೇಶ್ವರ, ಎನ್.ಮಹೇಶ್ವರ, ಮಂಜು ಬೆಳವಾಡಿ ದೇವನಾಗ್ ಇದ್ದರು.