

ಡಾ. ರಾಜಕುಮಾರ್ ಮಕ್ಕಳ ಪೈಕಿ, ಅವರ ಜತೆಗೆ ಅತೀ ಹೆಚ್ಚು ನಟಿಸಿದವರೆಂದರೆ ಅದು ಪುನೀತ್ ರಾಜಕುಮಾರ್. ಪುನೀತ್ ಬಾಲನಟರಾಗಿ ಕಾಣಿಸಿಕೊಂಡ ಚಿತ್ರಗಳ ಪೈಕಿ ‘ಭೂಮಿಗೆ ಬಂದ ಭಗವಂತ’ ಮತ್ತು ‘ಬೆಟ್ಟದ ಹೂವು’ ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕೆಲ್ಲಾ ಚಿತ್ರಗಳಲ್ಲೂ ರಾಜಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ‘ಭಾಗ್ಯವಂತ’ ಚಿತ್ರದಲ್ಲಿ ಅಶ್ವತ್ಥ್ ಜತೆಗೆ ನಟಿಸಿದರೂ, ರಾಜ್ ಅದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಮಿಕ್ಕಂತೆ, ‘ಸನಾದಿ ಅಪ್ಪಣ್ಣ’, ‘ವಸಂತ ಗೀತ’, ‘ಹೊಸ ಬೆಳಕು’, ‘ಚಲಿಸುವ ಮೋಡಗಳು’, ‘ಭಕ್ತ ಪ್ರಹ್ಲಾದ’, ‘ಎರಡು ನಕ್ಷತ್ರಗಳು’, ‘ಯಾರಿವನು’, ‘ಶಿವ ಮೆಚ್ಚಿದ ಕಣ್ಣಪ್ಪ’ ... ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ ಪುನೀತ್, ಕೊನೆಯದಾಗಿ ಬಾಲನಟನಾಗಿ ಕಾಣಿಸಿಕೊಂಡಿದ್ದು ‘ಪರಶುರಾಮ್ ಚಿತ್ರದಲ್ಲಿ. ಇಷ್ಟು ಚಿತ್ರಗಳಲ್ಲಿ ಪುನೀತ್, ರಾಜ್ ಮಗನಾಗಿ, ಸ್ನೇಹಿತನಾಗಿ ಅಭಿನಯಿಸಿದ್ದೇ ಹೆಚ್ಚು.