ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ನೇತ್ರಾವತಿ

Published on

ಪುತ್ತೂರು: ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್ ಮತ್ತೆ ಕುಸಿಯುವ ಭೀತಿ ಜೊತೆಗೆ ನೇತ್ರಾವತಿ ನದಿಯ ಉಪನದಿಗಳಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ 9.2 ಮೀಟರ್ ಏರಿಕೆಯಾಗಿ ಹರಿಯುತ್ತಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಾದ ಗೂಡಿನಬಳಿ, ಬಂಟ್ವಾಳ ರಸ್ತೆ, ಬಡ್ಡಕಟ್ಟೆ, ಪಾಣೆಮಂಗಳೂರಿನ ಹಲವೆಡೆ ನೆರೆ ನೀರು ಆವರಿಸಿದೆ.

ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಚಾರ್ಮಾಡಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಪರಿಣಾಮ ಸುತ್ತಮುತಯ್ತಲಿನ ಹೊಳೆ ಉಕ್ಕಿ ಹರಿಯುತ್ತಿದೆ. ಇದರಿಂದ ನೇತ್ರಾವತಿ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪಶ್ಚಿಮಘಟ್ಟದ ಅರಣ್ಯ ವ್ಯಾಪ್ತಿಯ ಚಾರ್ಮಾಡಿ ಸುತ್ತಮುತ್ತಲಿನ ಗುಡ್ಡ ಪ್ರದೇಶಗಳಲ್ಲಿ ಕಳೆದ 2ದಿನಗಳಿಂದ ನಿರಂತರ ಮಳೆಯಾಗಿದ್ದು, ಮತ್ತೆ ನೇತ್ರಾವತಿ ನದಿನೀರಿನ ಮಟ್ಟ ಹೆಚ್ಚಳವಾಗಿದ್ದು, ಉಪ್ಪಿನಂಗಡಿ ಸಮೀಪ ಹೆಚ್ಚಿನ ಪ್ರಮಾಣದ ನೀರಿನ ಹರಿಯುವಿಕೆ ಕಂಡುಬಂದಿದೆ.
 ಕಳೆದ ಆಗಸ್ಟ್ ವೇಳೆ ಸುರಿದ ಭಾರೀ ಮಳೆಗೆ ನೇತ್ರಾವತಿಯ ಉಪನದಿಗಳು ತುಂಬಿ ಹರಿದು ಬಹುತೇಕ ಕಡೆಗಳಲ್ಲಿ ಪ್ರವಾಹ ಎದುರಾಗಿತ್ತು. ಪಶ್ಚಿಮಘಟ್ಟದ ಬೆಟ್ಟಗಳು ನೇತ್ರಾವತಿ ಉಪನದಿಗಳು ನದಿಮೂಲಗಳು. ಕಳೆದ ಸಾಲಿನಲ್ಲಿ ಒಟ್ಟು ಬೆಟ್ಟ ಪ್ರದೇಶಗಳಲ್ಲಿ ಜೂ.1ರಿಂದ ಅಕ್ಟೋಬರ್ 30ರ ವರೆಗೆ 494ಮಿಮಿ ವಾಡಿಕೆ ಮಳೆಯಾಗುವಲ್ಲಿ 542ಮಿಮಿ (ಶೇ.8 ಹೆಚ್ಚುವರಿ ಮಳೆ)ಯಾಗಿದೆ. ಲಭ್ಯ ಮಾಹಿತಿ ಪ್ರಕಾರ ಕಳೆದ 20ವರ್ಷಗಳಲ್ಲೇ ಕಳೆದ ಬಾರಿ ಈ ಪ್ರದೇಶಗಳಲ್ಲಿ ವಾಡಿಕೆಗಿಂತ ಶೇ.7ರಿಂದ 11ರಷ್ಟು ಹೆಚ್ಚುವರಿ ಮಳೆಯಾಗಿದೆ.

ಅಪಾಯಮಟ್ಟ ತಲುಪಿದ ನೇತ್ರವತಿ ನದಿ ನೀರಿನ ಹರಿಯುವಿಕೆ
ಅಪಾಯಮಟ್ಟ ತಲುಪಿದ ನೇತ್ರವತಿ ನದಿ ನೀರಿನ ಹರಿಯುವಿಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net