

ಏಪ್ರಿಲ್ 8 ರಂದು ಎಸ್ ಆರ್ ಪಿ ರಸ್ತೆಯಲ್ಲಿ ಸುಮಾರು 30-35 ವರ್ಷದ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದ್ದು, ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಸುಮಾರು 30-35 ವಯಸ್ಸಾಗಿದ್ದು, 5.5 ಅಡಿ ಎತ್ತರ, ಕಪ್ಪು ತಲೆ ಕೂದಲು, ಕೋಲುಮುಖ, ಸಾಧಾರಣ ಮೈಕಟ್ಟು, ಎದೆಯಲ್ಲಿ ಮಂಜುಳ, ಬಲತೋಳಿನಲ್ಲಿ ಬಸವ ಎಡತೋಳಿನಲ್ಲಿ ವಿಜಯಸ್ವಾಮಿ ಎಂಬ ಹಸಿರು ಅಚ್ಚೆ ಇರುತ್ತದೆ. ಮೈ ಮೇಲೆ ಅರ್ಧ ತೋಳಿನ ನೀಲಿ ಬಿಳಿ ಚೌಕಾಲಿಯ ಅಂಗಿ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
ಅಪರಿಚಿತ ವ್ಯಕ್ತಿಯ ವಾರಸುದಾರರ ಬಗ್ಗೆ ಕಂಡು ಬಂದಲ್ಲಿ ಬನ್ನೂರು ಪೊಲೀಸ್ ಠಾಣೆಯ ದೂ.ಸಂ 08227-275632 ನ್ನು ಸಂಪರ್ಕಿಸಬಹುದು ಎಂದು ಬನ್ನೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.