

ಸುಮಾರು 35 ರಿಂದ 40 ವರ್ಷದ ಅಪರಿಚಿತ ಗಂಡಸು ರೈಲು ಗಾಡಿಗೆ ಸಿಕ್ಕಿ ಮೃತ ಪಟ್ಟಿರುತ್ತಾರೆ. ಮೃತದೇಹವು ಮೈಸೂರಿನ ಕೆ. ಆರ್. ಆಸ್ಪತ್ರೆಯ ಶವಾಗಾರದಲ್ಲಿದ್ದು, ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಸುಮಾರು 35 ರಿಂದ 45 ವರ್ಷ ವಯಸ್ಸಾಗಿದ್ದು, 5.7 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈ ಬಣ್ಣ, ಕೋಲುಮುಖ, ಉದ್ದ ಮೂಗು , ತಲೆಯಲ್ಲಿ ಸುಮಾರು 2 1/2 ಇಂಚು ಕಪ್ಪು ಕೂದಲು ಬಿಟ್ಟಿರುತ್ತಾರೆ. 1/2 ಇಂಚು ಕಪ್ಪು ಬಣ್ಣದ ಗಡ್ಡ ಮೀಸೆ ಬಿಟ್ಟಿರುತ್ತಾರೆ. ಮೃತ ಪಟ್ಟ ಸಂದರ್ಭದಲ್ಲಿ ಸಣ್ಣ ಗೋಲ್ಡನ್ ಬಣ್ಣದ ಗೆರೆ ಒಳ್ಳೆ ನೀಲಿ ಬಣ್ಣದ ಶರ್ಟ್, ನೀಲಿ ಬಣ್ಣದ ಜರ್ಕಿನ್ ನೀಲಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಬನಿಯನ್ ಕಂದು ಬಣ್ಣದ ಅಂಡರ್ ವೇರ್ ಧರಿಸಿರುತ್ತಾರೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆಯ ದೂ. ಸಂ: 0821-2516579 ನ್ನು ಸಂಪರ್ಕಿಸಬಹುದು ಎಂದು ಮೈಸೂರು ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.