ಅಪಘಾತದಲ್ಲಿ ವೃದ್ಧ ಸಾವು, ಓರ್ವನಿಗೆ ಗಾಯ

Accident
Published on

ಖಾನಾಪುರ: ರಾಮನಗರ&ಧಾರವಾಡ ರಸ್ತೆಯ ಚಿಂಚೆವಾಡಿ ಬಳಿ ದ್ವಿಚಕ್ರ ವಾಹನದ ಮೇಲೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರ ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಟನೆಯಲ್ಲಿ ಚಾಲಕ ನಿಗೆ ಗಾಯಗಳಾಗಿವೆ.

ಹಲಸಾಲ ಗ್ರಾಮದ ನಿವಾಸಿ ದತ್ತು ನಾರಾಯಣ ಕುಲಂ (70) ಮೃತಪಟ್ಟವರು. ಬೈಕ್​ ಚಲಾಯಿಸುತ್ತಿದ್ದ ಅವರ ಸೋದರಳಿಯ ವಾಮನ ಕುಲಂ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾನಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net