ಚಿಂತಾಮಣಿ: ಬೆಂಗಳೂರು ರಸ್ತೆಯ ತಳಗವಾರ ಸಮೀಪ ಟ್ರಾಕ್ಟರ್ ಹಿಂಭಾಗದ ಟ್ರಾಲಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕೋಲಾರ ತಾಲೂ ಕಿನ ಕ್ಯಾಲನೂರು ಸಮೀಪದ ಚನ್ನಸಂದ್ರ ಗ್ರಾಮದ ಸಂಚಲಪ್ಪ (50)ಮೃತ. ಟ್ರಾಕ್ಟರ್ ಭಾನುವಾರ ರಾತ್ರಿ ಹೊಸಹಳ್ಳಿಯಿಂದ ತಳಗವಾರ ಮೂಲಕ ಕೈವಾರಕ್ಕೆ ಹೋಗುತ್ತಿದ್ದರೆ, ಬೈಕ್ ಸವಾರ ಚನ್ನಸಂದ್ರದಿಂದ ಕೈವಾರಕ್ಕೆ ಹೋಗುತ್ತಿದ್ದ ಎನ್ನಲಾಗಿದೆ. ತಳಗವಾರ ಸಮೀಪದ ರಸ್ತೆ ಉಬ್ಬುಗಳಲ್ಲಿ ಟ್ರಾಕ್ಟರ್ ಚಾಲಕ ನಿಧಾನವಾಗಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್ ಟ್ರಾಲಿಗೆ ಡಿಕ್ಕಿಯಾಗಿದೆ. ನಾಗರಾಜ್ ತಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೈವಾರ ಹೊರಠಾಣೆಯ ಎಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತ ದೇಹವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಬೈಕ್ ವಶಕ್ಕೆ ಪಡೆದಿದ್ದಾರೆ. ಇನ್ನು ಟ್ರಾಕ್ಭಯದಿಂದ ವಾಹನ ನಿಲ್ಲಿಸದೆ ಗ್ರಾಮಕ್ಕೆ ತೆರಳಿದ್ದ. ಟ್ರಾಕ್ಟರ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.