

ಅಪಘಾತಗಳು ಸಂಭವಿಸುತ್ತಿರುವ ರಸ್ತೆಗಳ ಕಡೆ ಹೆಚ್ಚು ಗಮನ ಹರಿಸಬೇಕು. ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳಲ್ಲದೆ ಹಳ್ಳಿ ರಸ್ತೆಗಳನ್ನು ಗುರುತಿಸಬೇಕು, ಹಳ್ಳಿಗಳಲ್ಲಿಯೂ ಕೆಲವು ಕಡೆ ಕಪ್ಪು ಚುಕ್ಕೆಗಳಿದ್ದು, ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ಎಲ್ಲೆಲ್ಲಿ ಅಪಘಾತ ಆಗಿದೆ ಅವುಗಳನ್ನು ಗುರಿತಿಸಿ ಅಪಘಾತ ತಪ್ಪಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿಯಲ್ಲದೆ ಜಿಲ್ಲಾ ಹೆದ್ದಾರಿಯಾದ ಬನ್ನೂರು, ಬಸವಳ್ಳಿ ಗೇಟ್, ಕೋಟೆಯ ಹೊಮ್ಮರನಹಳ್ಳಿ, ಹ್ಯಾಂಡ್ ಪೋಸ್ಟ್ಗಳಲ್ಲಿ ಅನೇಕ ಅಪಘಾತ ಸಂಭವಿಸಿರುವುದರಿoದ ಕಪ್ಪು ಚುಕ್ಕೆ ಎಂದು ನೀಡಲಾಗಿದ್ದು, ಅವುಗಳನ್ನು ಪರಿಶೀಲಿಸಿ ರಸ್ತೆ ಸುರಕ್ಷತೆ ಬಗ್ಗೆ ನಿಮ್ಮ ಇಲಾಖೆಗೆ ಕಳುಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯ ಕೆಲವು ಕಡೆ ಚಿಕ್ಕ ಚಿಕ್ಕ ಅಪಘಾತ ಆಗುತ್ತಿದ್ದು, ಮುಖ್ಯರಸ್ತೆ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆ ಎಂದು ಅಲ್ಲಲ್ಲಿ ಮಾಡಿಕೊಂಡು ಬರಲಾಗಿದ್ದು, ಹಳ್ಳಿಗಳ ರಸ್ತೆಗಳಲ್ಲಿ ಸುರಕ್ಷತೆ ಬಗ್ಗೆ ನಿರ್ದಿಷ್ಟ ಗಮನ ಕೊಡದೆ ಇರುವಂತಹ ಹಳ್ಳಿ ರಸ್ತೆಗಳಲ್ಲಿ ಅಪಘಾತ ಹೆಚ್ಚಾಗಿ ಸಂಭವಿಸುತ್ತಿದ್ದು, ಹಳ್ಳಿಗಳಲ್ಲಿ ಆಗಿರುವಂತಹ ಅಪಘಾತಗಳ ಬಗ್ಗೆ ತನಿಖೆ ಮಾಡಿದರೆ ಅದನ್ನು ಸಹ ಸರಿಮಾಡಬಹುದು ಎಂದು ಹೇಳಿದರು.
ಇನ್ನೂ ಕೆಲವು ಕಡೆ ರಸ್ತೆ ಕಾಮಗಾರಿಯಾಗದೆ ಮುಕ್ಕಾಲು ಭಾಗ ಪೂರ್ಣಗೊಂಡಿರುವ ಹಾಗೂ ಅರ್ಧಕ್ಕೆ ನಿಂತಿರುವ ಕಾಮಗಾರಿಯನ್ನು ಟೆಂಡರ್ ಕರೆದು ಸಂಪೂರ್ಣ ಮಾಡಬೇಕು. ದಸರಾ ಬರುವ ಮುಂಚೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.
ಲಿಲಿತ ಮಹಲ್‌ನಲ್ಲಿ ಹೆಚ್ಚು ಜಾಗ ಇರುವುದರಿಂದ ರಸ್ತೆ ಬದಿ ಇರುವಂತಹ ಫುಡ್ ಕೊರ್ಟ್ಗಳಿಗೆ ಪ್ರತ್ಯೇಕ ಫುಡ್ ಕಾರ್ನರ್‌ಗಳನ್ನು ಸ್ಥಾಪಿಸಲು, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಡಲು ರಾಷ್ಟೀಯ ಹೆದ್ದಾರಿ ಅವರ ಜೊತೆ ಮಾತನಾಡಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ರಸ್ತೆ ವೃತ್ತ ಬದಿಗಳಲ್ಲಿ ಹೆಚ್ಚು ಅಪಘಾತವಾಗುತ್ತಿದ್ದು, ವೃತ್ತ ಇರುವ ಕಡೆ, ವೃತ್ತ ಸುತ್ತ ಮುತ್ತ ಟರ್ನಿಂಗ್ ಪಾಯಿಂಟ್‌ಗಳು ಇರುವ ಕಡೆ, ವ್ಯಾಪಾರ ಮಾಡುತ್ತಿರುವುದನ್ನು ತೆರವು ಗೊಳಿಸಬೇಕು. ಅಪಘಾತಗಳು ಸಂಭವಿಸುವ ವೃತ್ತಗಳ ಸುತ್ತ ಹೆಚ್ಚು ಗಮನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.