ಅಪ ಪ್ರಚಾರ ಆಗದಿರಲೆಂದು ಕೋರ್ಟ್ ಮೆಟ್ಟಿಲೇರಿದ್ದೇವೆ

images-4.jpeg
Published on

ಕೊಪ್ಪಳ: ನಾವು ರಾಜೀನಾಮೆ ನೀಡಿ ಹೊರ ಬಂದಿದ್ದು, ನಮ್ಮ‌ ಮೇಲೆ‌ ಹಲವು ಕಣ್ಣುಗಳಿವೆ‌. ನಮ್ಮ ಬಗ್ಗೆ ಅಪ ಪ್ರಚಾರ ಆಗದಿರಲಿ ಎಂದು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಸ್ಪಷ್ಟನೆ ನೀಡಿದರು.
ಗಂಗಾವತಿಯಲ್ಲಿ ಶನಿವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿದ್ದ ನಾವು ರಾಜೀನಾಮೆ ನೀಡಿ‌ ಹೊರ ಬಂದಿದ್ದೇವೆ. ಹೀಗಾಗಿ‌ ನಮ್ಮ ಮೇಲೆ‌ ಸಾಕಷ್ಟು ಕಣ್ಣುಗಳಿವೆ‌. ನಮ್ಮ ಯಸಸ್ಸು ಸಹಿಸದವರು ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ‌ವಿರುದ್ಧ ಅಪ ಪ್ರಚಾರ ಆಗದಿರಲಿ, ಜನರಿಗೆ ತಪ್ಪು ಸಂದೇಶ ಹೋಗದಿರಲೆಂದು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಹಾಗಂತ ನಾವು ಯಾವುದೇ ತಪ್ಪು ಮಾಡಿಲ್ಲ.‌‌ ಸದ್ಯ ಪರಿಸ್ಥಿತಿ ಹೇಗಿದೆಯೆಂದರೆ, ಸತ್ಯ ಹೊಸ್ತಲು ದಾಟುವುದರೊಳಗೆ ಸುಳ್ಳು ಊರೆಲ್ಲ ಸುತ್ತಾಡಿತ್ತಂತೆ ಎಂದು ಉದಾಹರಣೆ ನೀಡುವ ಮೂಲಕ ನ್ಯಾಯಲಯ ಮೆಟ್ಟಿಲೇರಿರುವ ಬಗ್ಗೆ ಸ್ಪಷ್ಟನೆ ನೀಡಿದರು.
ಗಂಗಾವತಿಯಲ್ಲಿ ನೂತನವಾಗಿ ಕೃಷೊ ಮಹಾವಿದ್ಯಾಲಯ ಆರಂಭವಾಗಿದ್ದು, ಇಂದು ಉದ್ಘಾಟನೆಯಾಗಲಿದೆ.
========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net