ಅನ್ಯಾಯದ ವಿರುದ್ಧ ರಾಜಿ ಮಾಡಿಕೊಳ್ಳದ ಮಾಚಿದೇವ

3BANNU1
Published on

ಬನ್ನೂರು: ಬಸವಾದಿ ಶರಣರಲ್ಲಿ ಮಡಿವಾಳ ಮಾಚಿದೇವರಿಗೆ ವಿಶೇಷ ಸ್ಥಾನವಿದ್ದು, ಯಾವುದೇ ಅನ್ಯಾಯವಾದರೂ ಸಹಿಸದ ಗುಣವನ್ನು ಹೊಂದಿದ್ದರು. ಸಮಾಜದಲ್ಲಿ ಜನರಿಗೆ ಆಗುವ ಅನ್ಯಾಯದ ವಿರುದ್ಧ ಅವರೆಂದೂ ರಾಜಿ ಮಾಡಿಕೊಂಡವರಲ್ಲ ಎಂದು ಜೆಡಿಎಸ್‌ನ ಕಾರ್ಯಾಧ್ಯಕ್ಷ ಬಿ.ಆರ್. ಮಂಜುನಾಥ್ ತಿಳಿಸಿದರು.


ಅವರು ಪಟ್ಟಣದ ತುರಗನೂರು ಗ್ರಾಮದಲ್ಲಿ ಮಡಿವಾಳ ಮಾಚಿದೇವ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, 12ನೇ ಶತಮಾನದಲ್ಲಿಯೇ ಸಮಾಜದ ಅಸಮಾನತೆ, ಜಾತೀಯತೆ, ಸ್ತ್ರೀ ಶೋಷಣೆ ವಿರುದ್ಧ ಹೋರಾಡಿದ ಅವರ ತತ್ವ ಸಿದ್ಧಾಂತಗಳನ್ನು ಯುವಕರು ಅನುಸರಣೆ ಮಾಡಿದರೆ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.


ಯಾವುದೇ ಒಬ್ಬ ವ್ಯಕ್ತಿಯನ್ನು ಅವರ ಸಾಧನೆಯಿಂದ ಗೌರವಿಸಬೇಕೆ ಹೊರತು ಅವರನ್ನು ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತ ಮಾಡಬಾರದೆಂದು ಮನವಿ ಮಾಡಿದರು. ತುರಗನೂರು ಗ್ರಾಮದ ಮುಖಂಡರು, ವಿವಿಧ ವರ್ಗದ ಯಜಮಾನರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net