ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಿ

16HDK1
ಎಚ್.ಡಿ.ಕೋಟೆ ಪಟ್ಟಣದಲ್ಲಿ ದಸಂಸ ಸಂಘಟನೆಯ ವತಿಯಿಂದ ದಲಿತ ಸಿ.ಎಂ ನೀಡಲು ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು.
Published on

ಎಚ್.ಡಿ.ಕೋಟೆ: ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಹಾಗೂ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಸಂಘಟನೆ ವತಿಯಿಂದ ಮಂಗಳವಾರ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಿಂದ ಹೊರಟ ಪ್ರತಿಭಟನಾಕಾರರು ಮುಖ್ಯ ರಸ್ತೆ ಮೂಲಕ ಮಿನಿ ವಿಧಾನ ಸೌಧ ತಲುಪಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು, ಅನಿಲ್ ಚಿಕ್ಕಮಾದು ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಘೋಷಣೆ ಕೂಗಿ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಟಕೆರೆ ಮಹೇಶ್, ಹೈರಿಗೆ ಕುಮಾರ್, ಹೊನ್ಮರಗಳ್ಳಿ ಕೋಳಿ ಸೋಮಣ್ಣ, ಕೆ.ಜಿ.ಹಳ್ಳಿ ರಾಜಪ್ಪ, ಆಟೋ ಕುಮಾರ್, ಉಮೇಶ, ಮಹದೇವ, ಕೃಷ್ಣ, ವೆಂಕಟೇಶಮೂರ್ತಿ, ಹರೀಶ್, ರಾಜಮ್ಮ, ಸಾವಿತ್ರಮ್ಮ, ಕುಮಾರ, ಕೃಷ್ಣ, ಗೋಪಾಲಸ್ವಾಮಿ, ಚೆಲುವಯ್ಯ, ಬಸವಲಿಂಗ ಜೈಪಾಲ್, ಸೋಮಣ್ಣ, ನಂದೀಶ,ಚಂದ್ರ, ಗೂಳಿಕಟ್ಟೆ, ಬೆಟ್ಟಪ್ಪ ವೆಂಕಟೇಶ ಸ್ವಾಮಿ ಮುತ್ತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net