ಅಧ್ಯಕ್ಷರಿಲ್ಲದ ಸಮ್ಮೇಳನ ಕನ್ನಡಕ್ಕೆ ಅಪಮಾನ

Kannada Rajyotsava
Published on

ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲಿಯೇ ಜಿಲ್ಲಾ ಅಧ್ಯಕ್ಷರಿಲ್ಲದ ಸಮ್ಮೇಳನವಾಗಿದ್ದು, ಇದು ಅಚ್ಚ ಕನ್ನಡ ಜಿಲ್ಲೆಗೆ ಮಾಡಿದ ಘೋರ ಅಪಮಾನವಾಗಿದೆ ಎಂದು ಕದಂಬ ಸೈನ್ಯ ಸಂಘಟನೆಯ ಅಧ್ಯಕ್ಷ ಬೇಕ್ರಿ ರಮೇಶ್ ಕಿಡಿಕಾರಿದರು.

ಮಂಡ್ಯ ಜಿಲ್ಲೆಯಲ್ಲಿ ಸಾಹಿತಿಗಳನ್ನು ವಿರೋಧಿಸುವವರನ್ನು ಎತ್ತಿಕಟ್ಟಿ ಈ ರೀತಿ ಜಿಲ್ಲೆಗೆ ಘೋರ ಅಪಮಾನ ಮಾಡಲಾಗಿದೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರ ವಿರುದ್ಧ ಪರಿಷತ್‌ನಲ್ಲಿ ಧ್ವನಿ ಎತ್ತಲಾಗದ ಪರಿಸ್ಥಿತಿ ಇದೆ. ಮಂಡ್ಯ ಜಿಲ್ಲೆಗೆ ಡಾ.ಮೀರಾ ಶಿವಲಿಂಗಯ್ಯ, ಪ್ರೊ.ಜಯಪ್ರಕಾಶ್‌ಗೌಡ ಅಥವಾ ಡಾ.ಪ್ರದೀಪ್‌ಕುಮಾರ್ ಅವರಲ್ಲಿ ಯಾರನ್ನಾದರೂ ಅಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು. ಆದರೆ ವೈಯಕ್ತಿಕ ಲಾಭದ ಕಾರಣ ಈ ರೀತಿ ಮಾಡಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕನ್ನಡ ನಾಡಿನ ಮಹನೀಯರು ಕಟ್ಟಿ ಬೆಳೆಸಿದ ಪರಿಷತ್ ತನ್ನ ಸ್ವಾಯತ್ತತೆ, ಘನತೆ, ಗೌರವಗಳನ್ನು ಕಳೆದುಕೊಳ್ಳುವಂತಾಗಿರುವುದು ಬೇಸರದ ಸಂಗತಿ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖಡರಾದ ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಬಿ.ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net