ಅಧ್ಯಕ್ಷರಾಗಿ ಉಮೇಶ್ ಆಯ್ಕೆ

24KDR1kuruba
ಕಡೂರು ಕನ್ನಡಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಣ್ಣೆಕೋರನಹಳ್ಳಿ ಉಮೇಶ್ ಮತ್ತು ಯಗಟಿ ಗೋವಿಂದಪ್ಪ ಅವರನ್ನು ಸಮಾಜದಿಂದ ಅಭಿನಂದಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಹೋಚಿಹಳ್ಳಿ ಬೋಗಪ್ಪ, ಶರತ್ ಕೃಷ್ಣಮೂರ್ತಿ, ತಿಪ್ಪೇಶ್ ಮತ್ತಿತರರಿದ್ದರು.
Published on

ಕಡೂರು: ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆಯುವ 537ನೇ ಕನಕ ಜಯಂತಿ ಆಚರಣಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ದೊಣ್ಣೆಕೋರನಹಳ್ಳಿ ಉಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹೋಚಿಹಳ್ಳಿ ಬೋಗಪ್ಪ ತಿಳಿಸಿದರು.

ಪಟ್ಟಣದ ಕನ್ನಡಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಒಮ್ಮತದ ನಿರ್ಣಯದೊಂದಿಗೆ ಹಾಗೂ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಸಮಕ್ಷಮದಲ್ಲಿ ಸಮಿತಿ ರಚಿಸಲಾಗಿದೆ. ಜಯಂತಿ ಆಚರಣಾ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಯಗಟಿ ಗೋವಿಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಡಿ.25ರಂದು ಯಗಟಿ ಗ್ರಾಮದಲ್ಲಿ ನಡೆಯುವ ಅರ್ಥಪೂರ್ಣ ಕನಕಜಯಂತಿ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

ದೊಣ್ಣೆಕೋರನಹಳ್ಳಿ ಉಮೇಶ್ ಮಾತನಾಡಿ, ಸಮಾಜದಿಂದ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು ಈ ಬಾರಿ ಗ್ರಾಮೀಣ ಭಾಗದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗುವುದು. ಮುಂದಿನ ದಿನಗಳಲ್ಲಿ ವಿವಿಧ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಸಮಾಜದ ಮುಖಂಡರಾದ ಕೆ.ಎಚ್.ಶಂಕರ್, ತಿಪ್ಪೇಶ್, ಕೆ.ಆರ್.ಸುರೇಶ್, ತೋಟದಮನೆ ಮೋಹನ್‌ಕುಮಾರ್, ಕಂಸಾಗರ ಸೋಮಶೇಖರ್, ಕೆ.ಜಿ.ಲೋಕೇಶ್ವರ್, ಯರದಕೆರೆ ಓಂಕಾರ್, ಗಿರೀಶ್, ಕೋಡಿಹಳ್ಳಿ ಸಿದ್ದಪ್ಪ, ಸವಿತಾ ರಮೇಶ್, ಧರ್ಮಣ್ಣ, ಕೆ.ಜಿ.ಶ್ರೀನಿವಾಸ್‌ಮೂರ್ತಿ, ತಿಪ್ಪೇಶ್, ಕೊನೆಮನೆ ರವಿ, ಕೆ.ಪ್ರಕಾಶ್, ರಂಗನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net