ಅಧಿಕೃತ ಲೋನ್ ಆ್ಯಪ್ ಕಂಪನಿಯ ಗ್ರಾಹಕರಿಗೆ ವಂಚನೆ: ಕಂಪನಿಯ ನೌಕರರ ಸೋಗಿನಲ್ಲಿ ಹಣ ಕಟ್ಟಿಸಿಕೊಂಡು ಮೋಸ

Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಆರ್‌ಬಿಐನ ಎನ್‌ಬಿಎ್ಸಿಯಿಂದ ಅನುಮತಿ ಪಡೆದು ವ್ಯವಹಾರ ನಡೆಸುತ್ತಿರುವ ಲೋನ್ ಆ್ಯಪ್ ಕಂಪನಿಗಳಿಗೂ ಮೋಸ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೈಬರ್ ವಂಚಕರು ಬೆಂಗಳೂರಿನ ಚಾಮರಾಪೇಟೆಯ ಕಂಪನಿಯೊಂದರ 16 ಗ್ರಾಹಕರಿಂದ 96 ಸಾವಿರ ರೂ. ಕಟ್ಟಿಸಿಕೊಂಡು ಯಾಮಾರಿಸಿದ್ದಾರೆ.

ಐಶ್ವರ್ಯ ಪ್ರಸಾದ್ ಎಂಬುವರು ಆರ್‌ಬಿಐನ ಎನ್‌ಬಿಎ್ಸಿಯಿಂದ (ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆ) ಅನುಮತಿ ಪಡೆದು, ನವಿ ಆ್ಯಪ್ ಹೆಸರಿನಲ್ಲಿ ವೈಯಕ್ತಿಕ ಸಾಲ, ದ್ವಿಚಕ್ರ ವಾಹನ ಸಾಲ ಹಾಗೂ ಗೃಹ ನಿರ್ಮಾಣ ಸಾಲ ನೀಡಲಾಗುತ್ತಿದೆ. 2 ಲಕ್ಷಕ್ಕೂ ಅಧಿಕ ಗ್ರಾಹಕರಿದ್ದು 140 ಮಂದಿ ನೌಕರರು ಕೆಲಸ ಮಾಡುತ್ತಿದ್ದಾರೆ.

ಕಳೆದ ಎರಡು ತಿಂಗಳಿಂದ ಕೆಲ ಗ್ರಾಹಕರು ಸಾಲದ ಹಣ ಪಾವತಿಸಿಲ್ಲ. ಈ ಬಗ್ಗೆ ಗ್ರಾಹಕರಿಗೆ ಕರೆ ಮಾಡಿ ಹಣ ಕಟ್ಟುವಂತೆ ಕಂಪನಿಯ ನೌಕರರು ಸೂಚಿಸಿದ್ದರು. ಈಗಾಗಲೇ ಹಣ ಕಟ್ಟಲಾಗಿದೇ ಎಂದು ಗ್ರಾಹಕರು ಹೇಳಿದ್ದಾರೆ. ಗ್ರಾಹಕರು ನವಿ ಆ್ಯಪ್ ಮುಖಾಂತರ ಹಣ ಪಾವತಿಸಿಲ್ಲ. ಅನಾಮಿಕರು ಕಂಪನಿಯ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ, ಗೂಗಲ್‌ಪೇ, ೆನ್‌ಪೇ ಹಾಗೂ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ ಮಾಡಿಸಿಕೊಂಡಿದ್ದಾರೆ. 16 ಗ್ರಾಹಕರಿಂದ 96,573 ರೂ. ಪಡೆದುಕೊಂಡು ವಂಚಿಸಿರುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೈಬರ್ ವಂಚಕರು ಕೃತ್ಯ ಎಸಗಿರುವ ಶಂಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಚಾಮರಾಜಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net