ಯಾದಗಿರಿ: ಎಲ್ಲದಕ್ಕೂ ತಕ್ಷಣ ಪ್ರತಿಕ್ರಿಯೆ ನೀಡುವ ಮರಿ ಖರ್ಗೆ, ಮಹರ್ಷಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಎರಡು ದಿನವಾದರೂ ಏಕೆ ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಇದು ಈ ಸರ್ಕಾರದ ಬಹುದೊಡ್ಡ ಹಗರಣ. ಮುಚ್ಚಿ ಹಾಕಲು ಸಿಎಂ, ಡಿಸಿಎಂ ಬಹಳ ಪ್ರಯತ್ನಪಟ್ಟಿದ್ದಾರೆ. ಸಾವಿಗೆ ಶರಣಾದ ಚಂದ್ರಶೇಖರ್ ಅವರ ಡೆತ್‌ನೋಟ್ ಸಿಕ್ಕ ಬಳಿಕ ಬಣ್ಣ ಬಯಲಾಗಿದೆ. ಆದರೂ ಸಚಿವರ ರಾಜೀನಾಮೆ ಪಡೆಯಲು ಹಿಂದೆ-ಮುAದೆ ನೋಡುತ್ತಿರುವುದನ್ನು ಗಮನಿಸಿದರೆ ಇಡೀ ಸರ್ಕಾರ ಶಾಮೀಲಾದಂತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಶಯ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಹೊತ್ತಲ್ಲಿ ಸರ್ಕಾರದ ಗಮನಕ್ಕಿಲ್ಲದೆ ನಕಲಿ ಅಕೌಂಟ್‌ಗಳಿಗೆ ೧೮೭ ಕೋಟಿ ರೂ. ವರ್ಗಾಯಿಸಲು ಸಾಧ್ಯವೆ? ಬೇರೆ ಬೇರೆ ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಎಲೆಕ್ಷನ್‌ಗೆ ಈ ಹಣ ಬಳಕೆಯಾದಂತಿದೆ. ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಾಲಿಗೆ ಎಟಿಎಂ ಆಗಿದೆ ಎಂದು ಆರೋಪಿಸಿದರು.
ಬಿಹಾರ ಮಾದರಿ ಗೂಂಡಾಗಿರಿ ಹೆಚ್ಚಿದ್ದು, ಹಾಡಹಗಲೆ ಕೊಲೆ, ಸುಲಿಗೆ ನಡೆಯುತ್ತಿವೆ. ಇದನ್ನು ನೋಡಿದರೆ ಅಂದಿನ ಕೊತ್ವಾಲ್ ರಾಮಚಂದ್ರ ಅರಾಜಕತೆ ಆತನ ಶಿಷ್ಯನ ಮೂಲಕ ನಡೆದಂತಿದೆ ಎಂದು ಹೆಸರು ಹೇಳದೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ಎನ್‌ಸಿಆರ್‌ಬಿ ವರದಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ ೪೫೦ ಕೊಲೆ, ೭೫೦ ಆತ್ಮಹತ್ಯೆಗಳಾಗಿವೆ. ರಾಜ್ಯದ ವಿವಿಧೆಡೆ ನಿರಂತರ ಕಾನೂನುಬಾಹಿರ ಚಟುವಟಿಕೆ ನಡೆದಿವೆ. ಜನರನ್ನು ರಕ್ಷಿಸುವ ಪೊಲೀಸರಿಗೇ ಭದ್ರತೆ ಒದಗಿಸಲು ಠಾಣೆ ಎದುರು ಮೀಸಲು ಪಡೆ ನಿಯೋಜಿಸಲಾಗುತ್ತಿದೆ. ಕಾನೂನು ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದನ್ನು ಇದು ತೋರಿಸಿಕೊಡುತ್ತದೆ ಎಂದು ಕಿಡಿಕಾರಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ಇದೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇತರರು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿದ್ದರು. ಆದರೀಗ ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆ ಜತೆಗೆ ಹಣದ ಅವ್ಯವಹಾರ ನಡೆದರೂ ಸಚಿವ ನಾಗೇಂದ್ರ ರಾಜಿನಾಮೆ ಪಡೆಯಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಈಶಾನ್ಯ ಪದವೀಧರ ಕ್ಷೇತ್ರದ ಹಾಲಿ ಎಂಎಲ್‌ಸಿ ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ್ ಬೀದರ್, ಬೆಂಗಳೂರು ಬಿಟ್ಟರೆ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಜನಪರ ವ್ಯಕ್ತಿಯಾಗಿದ್ದು, ಹಿಂದೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಗೆಲ್ಲಿಸಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಪ್ರಮುಖರಾದ ಮಹೇಶರಡ್ಡಿ ಮುದ್ನಾಳ್, ಈಶ್ವರಸಿಂಗ್ ಠಾಕೂರ್, ಲಲಿತಾ ಅನಪುರ, ದೇವೇಂದ್ರನಾಥ ನಾದ, ಗುರು ಮಾಕಾ, ಎಚ್.ಸಿ. ಪಾಟೀಲ್, ವಕ್ತಾರ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಪರಶುರಾಮ ಕುರಕುಂದಿ, ವೆಂಕಟರಡ್ಡಿ ಮುದ್ನಾಳ್ ಇದ್ದರು.