

ವಿಜಯಪುರ : ವಿನಾಕಾರಣ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಬೇರ್ಪಡಿಸಲಾಗಿದೆ. ಇದೇ ತೆರನಾಗಿ ಅನೇಕ ಇಲಾಖೆಗಳನ್ನು ಬೇರ್ಪಡಿಸಲಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಅಧಿಕಾರ ಹಂಚಿಕೆ ಮಾಡಲು ಇಲಾಖೆಯನ್ನು ಒಡೆಯಲಾಗಿದೆ. ಸಹಕಾರ ಇಲಾಖೆಯಲ್ಲಿದ್ದ ಸಕ್ಕರೆ ವಿಭಾಗವನ್ನು ಬೇರೆ ಮಾಡಿ ಪ್ರತ್ಯೇಕ ಸಚಿವಾಲಯ ತೆರೆದರು ಇದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಿ.ಹಾರನಹಳ್ಳಿ ರಾಮಸ್ವಾಮಿ ಅವರ ವರದಿ ಇಲಾಖೆಗಳನ್ನು ಸಮನ್ವಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ, ಆದರೂ ಸಹ ಯಾರೇ ಬಂದರೂ ಇದಕ್ಕೆ ಆದ್ಯತೆ ನೀಡುತ್ತಿಲ್ಲ. ಕೇವಲ ಐದು ವರ್ಷ ಸರ್ಕಾರ ಪೂರೈಸಿದರೆ ಸಾಕು ಅದೇ ದೊಡ್ಡ ಸಾಧನೆ ಎಂದು ಅಷ್ಟಕ್ಕೆ ಸೀಮಿತವಾಗುತ್ತಿದ್ದಾರೆ.