

ಹೊಳೆನರಸೀಪುರ: ತಮ್ಮ ಬಹು ವರ್ಷದ ಕನಸು ಇಂದು ನಮ್ಮ ಟ್ರಸ್ಟ್ ಮೂಲಕ ಈಡೇರುತ್ತಿರುವುದಕ್ಕ ಬಹಳ ಸಂತಸ ಆಗಿದೆ ಎಂದು ಹಾಸನ ಜಿಲ್ಲಾ ಅಬಕಾರಿ ಡಿಸಿ ನಾಗೇಶ್ ನುಡಿದರು.
ಪಟ್ಟಣದ ಕಾಲುವೇ ಕೆರೆ ಬೀದಿಯಲ್ಲಿ ಶ್ರೀಮತಿ ವೆಂಕಟಲಕ್ಷ್ಮಮ್ಮ ಮತ್ತು ಆರ್.ದಾಸಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ವೃದ್ದಾಶ್ರಮ ಮತ್ತು ಅನಾಥಾಶ್ರಮವನ್ನು ಉದ್ಘಾಟನಾ ಕಾರ್ಯಕ್ರಮದವನ್ನು ಉದ್ದೇಶಿಸಿ ಮಾತನಾಢಿದ ಅವರು ತಾವು ಅಬಕಾರಿ ಇಲಾಖೆಯ ಮೈಸೂರಿನಲ್ಲಿ ಅಧಿಕಾರಿ ಆಗಿದ್ದ ವೇಳೆ ಶ್ರೀರಂಗಪಟ್ಟಣದಲ್ಲಿ ಆರಂಭಗೊಂಡಿದ್ದ ವೃದ್ಧಾಶ್ರಮ ಮತ್ತು ಅನಾಥ ನಿಲಯವನ್ನು ಕಂಡು ನಾನು ಸಹ ಅದರಲ್ಲಿ ಭಾಗಿಯಾಗಿ ಅಷ್ಟಿಷ್ಟು ಸಹಕಾರ ನೀಡುತ್ತಿದ್ದೆ, ತದಾ ನಂತರ ತಾವು ತಮ್ಮ ಆತ್ಮೀಯರು ಸೇರಿ ಇಂತಹ ವೃದ್ದಾಶ್ರಮ ಮತ್ತು ಅನಾಥ ಆಶ್ರಮವನ್ನು ಏಕೆ ಆರಂಭಿಸಬಾರದು ಎಂಬ ಬಗ್ಗೆ ಯೋಚನೆ ಮಾಡಿ ತಮ್ಮ ಮಾತಾ ಪಿತೃಗಳ ಹೆಸರಿನಲ್ಲಿ ಆರಂಬಿಸುವುದು ಲೇಸು ಎಂದು ತಿರ್ಮಾನಿಸಿ ಅದಕ್ಕೆ ಒಂದು ರೂಪು ರೇಷೆಗಳನ್ನು ತಯಾರು ಮಾಡಿ ಅದನ್ನು ಇಂದು ಅನುಷ್ಟಾನಕ್ಕೆ ತರಲಾಗುತ್ತಿದೆ ಎಂದರು.
ಅದಕ್ಕಾಗಿ ಒಂದು ಟ್ರಸ್ಟ್‌ಅನ್ನು 2013 ರಲ್ಲಿ ಆರಂಭಿಸಿದ್ದು ಅದರ ಮೂಲಕ ಇಂದು ವೃದ್ದಾಶ್ರಮಕ್ಕೆ ಚಾಲನೆ ನೀಡಲಾಗುತ್ತಿದೆ, ಈ ಟ್ರಸ್ಟ್ ಮೂಲಕ ಇಂದು ಚಾಲನೆ ನೀಡಲಾಗುತ್ತಿದ್ದು ಆರಂಭದಲ್ಲಿ ಹತ್ತು ಮಂದಿ ವೃದ್ದರು ನಮ್ಮ ಆಶ್ರಮಕ್ಕೆ ನೊಂದಣಿ ಆಗಿದ್ದಾರೆ. ಅವರಿಗೆ ನಾವು ಉಚಿತವಾಗಿ ಊಟ ಉಫಚಾರಗಳನ್ನು ನೀಡಿ ಅವರು ಸಹ ತಾವು ಸಮಾಜದಲ್ಲಿ ನಿಕೃಷ್ಟರಾಗಿಲ್ಲ, ತಮಗೂ ಸಹ ಒಂದು ಅಧಾರದ ಕೈಗಳು ಇವೆ ಎಂಬುದನ್ನು ಮನವರಿಕೆ ಮಾಡಿ ಆತ್ಮ ಸ್ಥೈರ್ಯ ತುಂಬು ವುದು ನಮ್ಮ ಗುರಿ ಎಂದು ತಿಳಿಸಿದರು.
ಈ ವೃದ್ದಾಶ್ರಮ ಮತ್ತು ಅನಾಥಶ್ರಮ ಆರಂಭಕ್ಕೆ ಮುನ್ನ ತಮ್ಮ ಮನಸ್ಸಿನಲ್ಲಿ ಬಂದ ದೊಡ್ಡ ಪ್ರಶ್ನೆ ಎಂದರೆ ಸಮಾಜದಲ್ಲಿ ಬಹಳಷ್ಟು ಮಂದಿ ಎಲ್ಲವೂ ಇದ್ದರು ತಮ್ಮ ವಯಸ್ಸಾದ ಕಾಲದಲ್ಲಿ ನಮ್ಮನ್ನು ನೋಡಿಕೊಳ್ಳಲು ನಮ್ಮವರು ಎಂಬುವವರು ಇಲ್ಲದೆ ಹೋದಾಗ ಅಂತಹವರನ್ನು ಪೋಷಿಸುವುದು ಪುಣ್ಯದ ಕೆಲಸವೆಂದು ಪರಿಗಣಿಸಿ ಈ ಇಂದು ಈ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಮುಂದಾಗಬೇಕಾಯಿತೆಂದರು.
ತಮ್ಮ ಈ ವೃದ್ದಾಶ್ರಮವನ್ನು ನಮ್ಮ ಟ್ರಸ್ಟ್‌ನ ಅಧ್ಯಕ್ಷರು ಆಗಿರುವ ಮಂಜುನಾಥ್ ಅವರ ನೇತ್ರತ್ವದಲ್ಲಿ ನಡೆಯಲಿದೆ. ಅವಶ್ಯಕತೆ ಇದ್ದವರು ತಮ್ಮ ಪೂರ್ಣ ವಿವರಗಳನ್ನು ನೀಡಿದ್ದಲ್ಲಿ ಅದನ್ನು ಟ್ರಸ್ಟ್‌ನಲ್ಲಿ ಪರಿಶೀಲಿಸಿ ನೀಡಿರುವ ದಾಖಲೆ ಪತ್ರಗಳು ಸರಿ ಎಂಬ ಅಂಶ ಟ್ರಸ್ಟ್‌ಗೆ ಮನದಟ್ಟಾಗಿದ್ದಲ್ಲಿ ಅಂತಹವರಿಗೆ ಉಚಿತ ಪ್ರವೇಶ ನೀಡುವುದರೊಂದಿಗೆ ಅವರನ್ನು ಕುಟುಂಬ ಸದಸ್ಯರಾಗಿಸಿಕೊಂಡು ಆವರ ಯೋಗಕ್ಷೇಮ ಎಲ್ಲವನ್ನು ನಾವುಗಳು ನೋಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೆ ಮೊದಲು ನೂತನ ಆಶ್ರಮ ಕಟ್ಟಡದಲ್ಲಿ ಗಣಪತಿ ಹೋಮವನ್ನು ವಿದ್ಯುಕ್ತವಾಗಿ ನೇರವೇರಿಸಿದ ನಂತರ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು .
ವೇದಿಕೆ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಟಿಕಂಟ ಗಾಯನದಲ್ಲಿ ಆರು ಗೀತೆಗಳನ್ನು ಹಾಡಲಾಯಿತು.
ಈ ಕೋಟಿ ಕಂಠ ಗಾಯನದಲ್ಲಿ ನೂತನ ವೃದ್ದಾಶ್ರಮದ ಉದ್ಘಾಟನೆಯಲ್ಲಿ ಭಾಗವಹಿಸಿದ್ದವರು ಭಾಗವಹಿಸಿ ಆರು ಗೀತೆಗಳನ್ನು ವಾಚಿಸಿದರು.
ಈ ಆಶ್ರಮದ ಉದ್ಘಾಟನೆಯನ್ನು ಜಿಲ್ಲಾ ದೇವಾಂಗ ಸಮಾಜದ ನೌಕರರ ಸಂಘ ಅಧ್ಯಕ್ಷ ಸೋಮಶೇಖರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ದೇವಾಂಗ ನೌಕರರ ಸಂಘದ ಅರ್ಧಯಕ್ಷ ಬಿ.ಸೋಮಶೇಖರ್, ಅಬಕಾರಿ ಇಲಾಖೆಯ ಅಧಿಕಾರಿ ಮಂಜುನಾಥ್, ವಿಜಯಕುಮಾರ್, ಟ್ರಸ್ಟ್‌ನ ನಿರ್ದೆಶಕ ಸುಬ್ರಮಣ್ಯ , ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧಡೆಗಳಿಂದ ಅಬಕಾರ ಇಲಾಖೆಗೆ ಸೇರಿದ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು.